ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ಟೆಕ್ಕಿಯಿಂದ ವರದಕ್ಷಿಣೆ ಕಿರುಕುಳ

By Mrutyunjaya Kalmat
|
Google Oneindia Kannada News

Gagan-Sarvamangala
ಬೆಂಗಳೂರು, ಮೇ. 25 : ಇಷ್ಟಪಟ್ಟು ಪರಸ್ಪರ ಒಪ್ಪಿ ಮದುವೆಯಾದ ಸಾಫ್ಟ್ ವೇರ್ ಇಂಜಿನಿಯರೊಬ್ಬ ವರದಕ್ಷಿಣೆಯ ದುರಾಸೆಗಾಗಿ ಪತ್ನಿಯ ನಕ್ಷತ್ರದ ಮೇಲೆ ಗೂಬೆ ಕೂರಿಸಿ ವಿಚ್ಛೇಧನಕ್ಕೆ ಮುಂದಾಗಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ಪತ್ನಿ ಸರ್ವಮಂಗಳ ಹುಟ್ಟಿರುವುದು ಮೂಲಾ ನಕ್ಷತ್ರದಲ್ಲಿ, ಇವಳ ಜೊತೆಗೆ ಸಂಸಾರ ಮುಂದುವರಿಸಿದರೆ ನನ್ನ ತಂದೆ ಜೀವಕ್ಕೆ ಅಪಾಯವಿದೆ ಹೀಗಾಗಿ ಇವಳಿಗೆ ವಿಚ್ಛೇಧನ ನೀಡಲು ಮುಂದಾಗಿರುವೆ ಎಂದು ಕಾರಣ ನೀಡಿರುವ ಭೂಪ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಗಗನ್ ಹಿರೇಮಠ(31).

ಆದರೆ, ಈ ಟೆಕ್ಕಿ ಹೇಳುತ್ತಿರುವುದು ಸುಳ್ಳು ಎನ್ನುವುದು ಬಹಿರಂಗವಾಗಿದೆ. ಗಗನ್ ಹಿರೇಮಠನ ಪತ್ನಿ ಸರ್ವಮಂಗಳಾ ವಿಪ್ರೋ ಕಂಪನಿಯಲ್ಲಿ ಟೆಕ್ಕಿ. ಲಿಂಗಾಯಿತರ ವಧುವರರ ಟ್ರಸ್ಟ್ ಆಗಿರುವ ಸ್ನೇಹಾ ಟ್ರಸ್ಟ್ ಮೂಲಕ ಈ ಇಬ್ಬರ ಪರಿಚಯವಾಗಿ ಎರಡೂ ಕುಟುಂಬಗಳ ಹಿರಿಯರು ಹಾಗೂ ಮದುವೆಯಾಗುವ ಗಂಡು, ಹೆಣ್ಣಿನ ಒಪ್ಪಿಗೆ ಪಡೆದುಕೊಂಡೆ ನಂತರ 2007ರಲ್ಲಿ ಮದುವೆ ಮಾಡಲಾಗಿದೆ. ವರದಕ್ಷಿಣೆ ಅಂತ ಹೆಣ್ಣಿನ ಕಡೆಯವರು 3 ಲಕ್ಷ ರುಪಾಯಿ, 250 ಗ್ರಾಂ ಚಿನ್ನ ಕೊಟ್ಟಿದ್ದರು. ಆದರೆ, ಗಗನ್ ನ ಬೇಡಿಕೆ 5 ಲಕ್ಷ ರುಪಾಯಿ ಆಗಿತ್ತು.

ಮದುವೆಯಾದ ಹೊಸದರಲ್ಲಿ ಹನಿಮೂನ್ ಗೆಂದು ಪುಣೆ ಮತ್ತು ಮಹಾಬಲಿಪುರಂಗೆ ತೆರಳಿದಾಗಲೇ ಗಗನ್ ತನ್ನ ಅಸಲಿ ರೂಪವನ್ನು ತೋರಿಸಿದ್ದಾನೆ. ನಂತರ ಹಾಗೋಹೀಗೋ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಉತ್ತಮ ಕೆಲಸದಲ್ಲಿದ್ದರೂ ಗಗನ್ ನ ಹಣದ ದಾಹ ತೀರಿರಲಿಲ್ಲ. ವರದಕ್ಷಿಣೆಗಾಗಿ ಪತ್ನಿಗೆ ನಿತ್ಯ ಕಾಟ ಶುರು ಹಚ್ಚಿಕೊಂಡ, ವಿಚಿತ್ರ ಕಿರುಕುಳ ತಡೆದುಕೊಳ್ಳಲಾರದೇ ಸರ್ವಮಂಗಳಾ ತನ್ನ ಅಣ್ಣನ ಮನೆಯಲ್ಲಿ ವಾಸಿಸತೊಡಗಿದಳು. ಕೊನೆಯದಾಗಿ ವಿಚ್ಛೇಧನಕ್ಕೆ ನಿರ್ಧರಿಸಿದ ಗಗನ್, ನಿನ್ನ ನಕ್ಷತ್ರ ಸರಿಯಿಲ್ಲ. ಮೂಲಾ ನಕ್ಷತ್ರದಲ್ಲಿ ಹುಟ್ಟಿರುವುದು. ಹೀಗಾಗಿ ನಿನ್ನ ಜೊತೆ ಸಂಸಾರ ಮುಂದುವರಿಸಿದರೆ ನನ್ನ ತಂದೆಯ ಪ್ರಾಣಕ್ಕೆ ಅಪಾಯವಿದೆ, ಹೀಗಾಗಿ ವಿಚ್ಛೇದನಕ್ಕೆ ನೀಡುವುದಾಗಿ ನೋಟಿಸ್ ಮೂಲಕ ತಿಳಿಸಿದ್ದಾನೆ. ಈ ಮಧ್ಯೆ ಗಗನ್ ಸರ್ವಮಂಗಳಾಳನ್ನು ಕೊಲೆ ಮಾಡಲು ಯತ್ನಿಸಿದ್ದ ಎಂದು ಸರ್ವಮಂಗಳಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ತೀವ್ರ ಕಿರುಕುಳಕ್ಕೆ ಒಳಗಾಗಿರುವ ಸರ್ವಮಂಗಳಾ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಗಗನ್ ಹಿರೇಮಠ ಮತ್ತು ಆತನ ಕುಟುಂಬದ ವಿರುದ್ಧ ದೂರು ಸಲ್ಲಿಸಿದ್ದಾರೆ. ಐಪಿಸಿ ಸೆಕ್ಷನ್ 498(ಎ), 307 ಮತ್ತು 34 ಸೆಕ್ಷನ್ 3,4 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಗನ್ ತಂದೆ ಮತ್ತು ತಾಯಿಯನ್ನು ಬಂಧಿಸಿದ್ದಾರೆ. ಗಗನ್ ತಂದೆ ಜಾಮೀನಿನ ಮೂಲಕ ಹೊರಗಡೆ ಬಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X