ಕುಡಿದ ಮತ್ತಿನಲ್ಲಿ ವಿಷಾಹಾರ ಸೇವನೆ : 4 ಸಾವು

ಸತ್ತವರಲ್ಲಿ ಇಬ್ಬರು ಉತ್ತರ ಪ್ರದೇಶದವರಾಗಿದ್ದು ಹೊಟ್ಟೆ ಹೊರೆಯುವುದಕ್ಕಾಗಿ ಐಸ್ ಕ್ರೀಂ ಮಾರುತ್ತಿದ್ದರು. ಉಳಿದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಢಾಬಾವೊಂದರಲ್ಲಿ ಕುಡಿದು ನಂತರ ತಾವೇ ಆಹಾರ ತಯಾರಿಸಿಕೊಂಡು ತಿಂದಿದ್ದಾರೆ. ಬೆಳಗೆದ್ದಾಗ ನಾಲ್ವರು ಸತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಉಳಿದವರಿಗೆ ತಲೆ ಸುತ್ತುವುದು ಮತ್ತು ವಾಂತಿಯಾದಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಾಹಾರ ಸೇವಿಸಿದ್ದರಿಂದ ಸತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಗಾಂಜಾ ಮಾರಾಟ, ಇಬ್ಬರ ಬಂಧನ : ಬೆಂಗಳೂರಿನ ಸಿಟಿ ಮಾರ್ಕೆಟ್ಟಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕೇಂದ್ರ ಅಪರಾಧ ದಳದ ಪೊಲೀಸರು ಮಂಗಳವಾರ ಬಂಧಿಸಿದ್ದು ಅವರಿಂದ 3.5 ಲಕ್ಷ ರು. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹೌರಾ-ಚೆನ್ನೈ ಎಕ್ಸ್ ಪ್ರೆಸ್ ರೈಲಿನಿಂದ ಆಗಮಿಸಿದ ಜಿತೇಂದ್ರ ಪೈಕೋ ಮತ್ತು ದಿಲೀಪ್ ಪಾಯಕ್ ಎಂಬಿಬ್ಬರು ಗಾಂಜಾ ಮಾರುತ್ತಿದ್ದಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರೂ ಓರಿಸ್ಸಾದ ಗಜಪತಿ ಜಿಲ್ಲೆಯವರು ಎಂದು ತಿಳಿದುಬಂದಿದೆ.












Click it and Unblock the Notifications