ಒದೆಯಿರಿ ಎಂದದ್ದು ರೈಟ್ ಸ್ಟೇಟ್ ಮೆಂಟ್

HD Kumarswamy
ಬೆಂಗಳೂರು, ಮೇ. 25 : ಮುಖ್ಯಮಂತ್ರಿ, ಸಚಿವರನ್ನು ಬೀದಿಯಲ್ಲೇ ಒದೆಯಿರಿ ಎಂಬ ಹೇಳಿಕೆ ಮಾಜಿ ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ. ಜನರ ರಕ್ಷಣೆ ಮಾಡುವೆ ಎಂದು ಅಧಿಕಾರ ಹಿಡಿದು ಜನದ್ರೋಹಿ ಕೆಲಸ ಮಾಡುತ್ತಾ ಕಾಲ ತಳ್ಳಿದರೆ ಒದೆಯದೆ ಇನ್ನೇನು ಮಾಡಬೇಕು ಹೇಳಿ ಎಂದು ಅವರು ಮರುಪ್ರಶ್ನಿಸಿದ್ದಾರೆ.

ಕೆ ಆರ್ ನಗರ ತಾಲ್ಲೂಕಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಜನತೆಗೆ ಪ್ರಚೋದನೆ ನೀಡುವ ಕೆಲಸವಲ್ಲ. ನಾನು ಕೂಡ ಮುಖ್ಯಮಂತ್ರಿಯಾಗಿದ್ದವನು, ನನಗ ಗೊತ್ತಿದೆ. ಮತ ಪಡೆಯಲು ಜನರ ಬಳಿ ತೆರಳುವ ಸರಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸದಿದ್ದಾಗ ಜನರು ಒದ್ದು ಬುದ್ದಿ ಕಲಿಸಬಾರದು ಎಂದು ಮುನ್ನೆಚ್ಚರಿಕೆ ನೀಡಿದೆ ಎಂದರು.

ಉತ್ತರ ಕರ್ನಾಟಕದಲ್ಲಿನ ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ, ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಿಗಳನ್ನು ಬೀದಿಯಲ್ಲೇ ಒದೆಯಿರಿ ಎಂದು ಕರೆ ನೀಡಿದ್ದರು. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ಕಂದಾಯ ಸಚಿವ ಕರುಣಾಕರರೆಡ್ಡಿ ಅವರು ಕುಮಾರಸ್ವಾಮಿಗೆ ಸಂಸ್ಕೃತಿಯೇ ಇಲ್ಲ. ಅವರಿಗೆ ಬುದ್ಧಭ್ರಮಣೆಯಾಗಿದೆ. ಕೂಡಲೇ ಅವರನ್ನು ಹುಚ್ಚಾಸ್ಪತ್ರೆಗೆ ದಾಖಲಿಸಬೇಕು ಎಂದು ಕಿಡಿಕಾರಿದ್ದರು.

ನೈಸ್ ವಿಷಯದಲ್ಲಿ ಯಡಿಯೂರಪ್ಪ ಅವರ ಸರಕಾರ ಅಶೋಕ್ ಖೇಣಿ ಪರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದ ಮಾಜಿ ಪ್ರಧಾನಿ ದೇವೇಗೌಡ, ಯಡಿಯೂರಪ್ಪ ಅವರನ್ನು ರಾವಣನಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದರು. ಭೂಮಿಯನ್ನು ಸೀತೆಗೆ ಹೋಲಿಸಿ ಯಡಿಯೂರಪ್ಪ ರೈತರ ಸೀತೆಯನ್ನು ಅಪಹರಿಸಿದ್ದಾರೆ ಎಂದು ಗೇಲಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+