ಸ್ಪೈಸ್ ಜೆಟ್ ವಿಮಾನದ ಟೈರ್ ಸ್ಫೋಟ
ನವದೆಹಲಿ,
ಮೇ.25:ಮಂಗಳೂರು ವಿಮಾನ ದುರಂತದ ಕರಿನೆರಳ ಬೆನ್ನಲ್ಲೇ ಇಂದು ಮಧ್ಯಾಹ್ನ 2 ಗಂಟೆಗೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಟ್ ಜೆಟ್ ವಿಮಾನದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. id="toptextpromo">ದೆಹಲಿ
ಹಾಗೂ ಶ್ರೀನಗರ ಮಾರ್ಗದ ಈ ವಿಮಾನ ಐಜಿಐ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವ ವೇಳೆಯಲ್ಲಿ ಟೈರ್ ನಲ್ಲಿ ದೋಷ ಕಂಡು ಬಂದಿದೆ. ರಬ್ಬರ್ ಚೂರೊಂದು ಟೈರ್ ನಿಂದ ಹೊರಬಿದ್ದು, ಟೈರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿಮಾನ
ತುರ್ತು ಭೂಸ್ಪರ್ಶವಾದ ರನ್ ವೇ ಬಿಟ್ಟು ಉಳಿದ ರನ್ ವೇ ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಇತ್ತೀಚೆಗಷ್ಟೇ ವಿಮಾನಯಾನ ಕ್ಷೇತ್ರದಲ್ಲಿ ಸ್ಪೈಸ್ ಜೆಟ್ ಐದು ವರ್ಷ ಪೂರೈಸಿ, ಸಂಭ್ರಮ ಆಚರಿಸಿತ್ತು. ಪ್ರತಿ ದಿನ ಸುಮಾರು 131 ಸ್ಪೈಸ್ ಜೆಟ್ ವಿಮಾನಗಳು ದೇಶದ 19ಕ್ಕೂ ಹೆಚ್ಚು ಸ್ಥಳಗಳಿಗೆ ಹಾರಾಟ ಮಾಡುತ್ತವೆ.











Click it and Unblock the Notifications