ಮುಂಬೈ ದಾಳಿ : ಮಂಗಳೂರಲ್ಲಿ ಉಗ್ರ ಬಂಧನ
ಮಂಗಳೂರು,
ಮೇ. 24 : ಮುಂಬೈ ಭಯೋತ್ಪಾದನೆಯ ಪ್ರಮುಖ ರೂವಾರಿ ಎನ್ನಲಾಗಿರುವ ಕರ್ನಾಟಕ ಮೂಲದ ಭಟ್ಕಳದ ಅಬ್ದುಲ್ ಸಮದ್ ಭಟ್ಕಳನನ್ನು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ. id="toptextpromo">ಕೇಂದ್ರೀಯ
ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆ, ಇಂದು ಬೆಳಗ್ಗೆ ದುಬೈನಿಂದ ಮಂಗಳೂರಿಗೆ ಬಂದಿಳಿದ ಉಗ್ರ ಅಬ್ಧುಲ್ ಸಮದ್ ಭಟ್ಕಳನನ್ನು ಬಂಧಿಸಿದರು. ಉಗ್ರನನ್ನು ಬಂಧಿಸಿದ ಪೊಲೀಸರು ತಕ್ಷಣ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಸೆರೆ ಸಿಕ್ಕಿರುವ ಉಗ್ರ ನಿಷೇಧಿತ ಸಿಮಿ ಸಂಘಟನೆಯ ಸದಸ್ಯ ಹಾಗೂ ಇಂಡಿಯನ್ ಮುಜಾಹೀದಿನ್ ಸಂಘಟನೆ ಸದಸ್ಯನಾಗಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಪಾಕಿಸ್ತಾನದಲ್ಲಿ
ಕುಳಿತುಕೊಂಡು ಮುಂಬೈ ದಾಳಿಯ ಸಂಚು ರೂಪಿಸಿದವರಲ್ಲಿ ಅಬ್ಧುಲ್ ಸಮದ್ ಕೂಡಾ ಒಬ್ಬನಾಗಿದ್ದಾನೆ. ಅಲ್ಲದೇ ಪುಣೆಯ ಫೆ 14 ರಂದು ನಡೆದ ಜರ್ಮನ್ ಬೇಕರಿಯಲ್ಲಿ ನಡೆದ ಸ್ಫೋಟದಲ್ಲೂ ಇವನ ಕೈವಾಡವಿದೆ ಪೊಲೀಸ್ ಮೂಲಗಳು ತಿಳಿಸಿವೆ.











Click it and Unblock the Notifications