ಪ್ರಮೋದ್ ಮುತಾಲಿಕ್ ವಿರುದ್ಧ ಕ್ರಮ : ಯಡಿಯೂರಪ್ಪ

ರಾಮಸೇನೆ ನಡೆಸಿರುವ ಹಗರಣ ಬೆಳಕಿಗೆ ಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದ್ದರೆ ಶಿಕ್ಷೆ ಖಂಡಿತ ಎಂದರು. ದುಡ್ಡು ತೆಗೆದುಕೊಂಡು ಗಲಭೆ ಎಬ್ಬಿಸುವುದು ಗಂಭೀರ ಪ್ರಕರಣ, ಈ ಬಗ್ಗೆ ಸಮಗ್ರ ತನಿಖೆಯನ್ನು ಪೊಲೀಸರು ಕೈಗೊಳ್ಳುತ್ತಾರೆ. ಪ್ರಮೋದ್ ಮುತಾಲಿಕ್ ಅವರು ತಪ್ಪೇ ಮಾಡಿದ್ದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಬಿಜೆಪಿಗೂ ಮುತಾಲಿಕ್ ಗೂ ಸಂಬಂಧವಿಲ್ಲ, ಆಚಾರ್ಯ
ದುಡ್ಡಿಗಾಗಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅದಕ್ಕೂ ಮುನ್ನ ಸತ್ಯಾಸತ್ಯತೆ ಅರಿಯಲು ಮಾಧ್ಯಮಗಳಲ್ಲಿ ಬಿತ್ತರವಾಗಿರುವ ದೃಶ್ಯಗಳ ಸಂಪೂರ್ಣ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆಚಾರ್ಯ ಹೇಳಿದರು.
ಬಿಜೆಪಿಗೂ, ರಾಮಸೇನೆಗೂ ಯಾವುದೇ ಸಂಬಂಧವಿಲ್ಲ. ಅವರನ್ನು ಉಳಿಸುವ ಯಾರ ಪ್ರಯತ್ನವನ್ನೂ ಸರಕಾರ ಮಾಡುತ್ತಿಲ್ಲ. ಪ್ರಮೋದ್ ಮುತಾಲಿಕ್ ತಪ್ಪೇ ಮಾಡಿದ್ದರೆ ಶಿಕ್ಷೆ ಅನುಭವಿಸಲೇಬೇಕು ಎಂದು ಆಚಾರ್ಯ ಹೇಳಿದರು.











Click it and Unblock the Notifications