ಶೀಘ್ರ ನರ್ಸಿಂಗ್ ವಿವಿ ಸ್ಥಾಪನೆ
ಬೆಂಗಳೂರು,
ಮೇ. 13 : ಶಿಕ್ಷಣ, ವೈದ್ಯ ಮತ್ತು ತಾಂತ್ರಿಕ ವಿಶ್ವವಿದ್ಯಾಲಯಗಳ ಮಾದರಿಯಲ್ಲಿಯೇ ನರ್ಸಿಂಗ್ ಕ್ಷೇತ್ರಕ್ಕೂ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಸರಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಸಚಿವ ರಾಮಚಂದ್ರಗೌಡ ಹೇಳಿದರು. id="toptextpromo">ನಗರದಲ್ಲಿ
ಅಂತಾರಾಷ್ಟ್ರೀಯ ನರ್ಸ್ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು. ವಿವಿ ಸ್ಥಾಪನೆ ವಿಷಯವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ಮುಂದೆ ರಾಜ್ಯೋತ್ಸವ ಪ್ರಶಸ್ತಿಗೂ ಈ ಕ್ಷೇತ್ರದ ಸಾಧಕರನ್ನು ಪರಿಗಣಿಸಲಾಗುವುದು ಎಂದರು. ಕಲೆ, ಶಿಕ್ಷಣ ಕ್ಷೇತ್ರದಂತೆ ನರ್ಸಿಂಗ್ ಕ್ಷೇತ್ರದಲ್ಲೂ ಉತ್ತಮ ಸೇವೆ ಸಲ್ಲಿಸಿದ ಸಾಧಕರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ರಾಮಚಂದ್ರಗೌಡ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಬೆಂಗಳೂರು
ಹೆಲ್ತ್ ಹಬ್ ಆಗಿ ಅಭಿವೃದ್ಧಿಯಾಗಿದೆ. ರಾಜ್ಯಾದ್ಯಂತ ಪರಿಣಿತ ನರ್ಸ್ ಗಳಿದ್ದಾರೆ. ಹೀಗಾಗಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ವೈದ್ಯರಿಗಿಂತಲೂ ಹೆಚ್ಚಿನ ಸೇವೆಯನ್ನು ನರ್ಸ್ ಗಳು ನೀಡುತ್ತಿದ್ದಾರೆ ಎಂದು ಗೌಡ ಅಭಿಪ್ರಾಯಪಟ್ಟರು.











Click it and Unblock the Notifications