ನಾಯಿ ಹೇಳಿಕೆಗೆ ಗಡ್ಕರಿ ಕ್ಷಮಾಯಾಚನೆ

ಯಾರ ಮನಸ್ಸನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ನುಡಿಗಟ್ಟಿನ ರೀತಿಯಲ್ಲಿ ಬಳಸಿದೆ ಅಷ್ಟೇ. ಇದು ಉದ್ದೇಶಪೂರ್ವಕವಾಗಿ ಆಡಿದ ಮಾತುಗಳಲ್ಲ.ಇದರಿಂದ ಲಾಲೂ ಹಾಗೂ ಮುಲಾಯಂ ಅವರಿಗೆ ನೋವಾಗಿದ್ದರೆ ನನ್ನ ಕ್ಷಮೆ ಬೇಡುತ್ತೇನೆ ಎಂದು ಗಡ್ಕರಿ ಹೇಳಿಕೆ ನೀಡಿದ್ದಾರೆ.
ಚಂಡೀಗಢದಲ್ಲಿ ಬುಧವಾರ ನಡೆದ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಗಡ್ಕರಿ, ಇತ್ತೀಚೆಗೆ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಆಡಳಿತಾರೂಢ ಯುಪಿಎ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ವೇಳೆ ಈ ಇಬ್ಬರು ನಾಯಕರು ನಡೆದುಕೊಂಡ ವರ್ತನೆ ಬಗ್ಗೆ ಕಿಡಿಕಾರಿದರು.
ಬೆಲೆ ಏರಿಕೆ, ದುರಾಡಳಿತದ ಕುರಿತಂತೆ ಮುಲಾಯಂ ಸಿಂಗ್ ಮತ್ತು ಲಾಲೂ ಪ್ರಸಾದ್ ಸಿಂಹದ ತರ ಬೊಬ್ಬೆ ಹೊಡೆಯುತ್ತಾರೆ. ಆದರೆ ವಿಪರ್ಯಾಸವೆಂದರೆ ನಂತರ ಇವರು ಸೋನಿಯಾ ಮತ್ತು ಕಾಂಗ್ರೆಸ್‌ನ ಕಾಲು ನೆಕ್ಕುವ ನಾಯಿಯಂತೆ ವರ್ತಿಸುತ್ತಿದ್ದಾರೆ ಎಂದು ಮಾನನಷ್ಟ ಹೇಳಿಕೆ ನೀಡಿದ್ದರು.












Click it and Unblock the Notifications