ಭರ್ಜರಿ ಲಾಭದಲ್ಲಿ ಖಾಸಗಿ ವಿಮೆ ಕಂಪೆನಿಗಳು

ಹೊಸ ವ್ಯಾಪಾರದ ಆದಾಯದಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ವಿಮಾ ಕಂಪೆನಿ ಎಸ್ ಬಿಐ ಲೈಫ್ ಕಳೆದ ಹಣಕಾಸು ವರ್ಷದಲ್ಲಿ 276ಕೋಟಿ ರೂಪಾಯಿ ಲಾಭ ಗಳಿಸಿದ್ದು ಹಿಂದಿನ ವರ್ಷ 26ಕೋಟಿ ರೂಪಾಯಿಗಳ ನಷ್ಟ ದಾಖಲಿಸಿತ್ತು. 2008-09 ರ ಕೊನೇ ತ್ರೈಮಾಸಿಕದಲ್ಲಿ ಲಾಭ ದಾಖಲಿಸಿದ್ದ ಬಜಾಜ್ ಅಲಿಯಾನ್ಜ್ 2009-10 ನೇ ಸಾಲಿನಲ್ಲಿ 417 ಕೋಟಿ ರೂಪಾಯಿಗಳ ಲಾಭ ಗಳಿಸಿದೆ.
ಉತ್ತಮ ನಿರ್ವಹಣೆ ಮತ್ತು ದಕ್ಷ ವಿತರಣೆಯಿಂದ ಕಂಪೆನಿ ಲಾಭ ಗಳಿಸಿದೆ ಎಂದು ಬಜಾಜ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಮೇಶ್ ಗೋಯೆಲ್ ಹೇಳಿದರು. ಕಂಪೆನಿಯ ಆಡಳಿತಾತ್ಮಕ ವೆಚ್ಚ ಶೇ.19.2 ರಿಂದ ಶೇ.16.5ಕ್ಕೆ ಇಳಿಸಲಾಗಿದೆ ಎಂದೂ ಅವರು ಹೇಳಿದರು.
ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ನ 2009-10ರ ಲಾಭ 258 ಕೋಟಿ ರೂಪಾಯಿಗಳಾಗಿದೆ. ಕೊಟಕ್ ಮಹೀಂದ್ರಾದ 2009-10 ನೇ ಸಾಲಿನ ಲಾಭದಲ್ಲಿ ಶೇ383ರಷ್ಟು ಹೆಚ್ಚಾಗಿದೆ. ಕಂಪೆನಿ 69 ಕೋಟಿ ರೂಪಾಯಿ ಲಾಭ ಗಳಿಸಿದ್ದು 2008-09ರಲ್ಲಿ 14 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಆಡಳಿತಾತ್ಮಕ ವೆಚ್ಚದ ಕಡಿತವೇ ವಿಮಾ ಕಂಪೆನಿಗಳ ಲಾಭ ಗಳಿಕೆಗೆ ಮೂಲ ಕಾರಣ ಎನ್ನಲಾಗಿದ್ದು ಕಂಪೆನಿಗಳು ಇತ್ತೀಚೆಗೆ ಬಂಡವಾಳ ಹೆಚ್ಚಳ ಮಾಡಿಲ್ಲ ಎನ್ನುವುದೂ ಗಮನಾರ್ಹವಾಗಿದೆ.
ಕೆಲ ಕಂಪೆನಿಗಳು ಲಾಭ ಇಲ್ಲದ ತಮ್ಮ ಶಾಖೆಗಳನ್ನು ಮುಚ್ಚಿವೆ. ಹೆಚ್ ಡಿಎಫ್ ಸಿ ಸ್ಟಾಂಡರ್ಡ್ ಲೈಫ್ ತನ್ನ ಹಿಂದಿನ ನಷ್ಟವಾದ 502 ಕೋಟಿ ರೂಪಾಯಿಗಳನ್ನು ಕಳೆದ ವರ್ಷ 275 ಕೋಟಿ ರೂಪಾಯಿಗಳಿಗೆ ಇಳಿಸಿಕೊಂಡಿದೆ. ಬಿರ್ಲಾ ಸನ್ ಲೈಫ್ ತನ್ನ 702 ಕೋಟಿ ರೂಪಾಯಿಗಳ ನಷ್ಟವನ್ನು 435 ಕೋಟಿ ರೂಪಾಯಿಗಳಿಗೆ, ರಿಲಯನ್ಸ್ ಲೈಫ್ 1,069 ಕೋಟಿ ರೂಪಾಯಿಗಳ ನಷ್ಟವನ್ನು 262 ಕೋಟಿ ರೂಪಾಯಿಗಳಿಗೆ ಇಳಿಸಿಕೊಂಡಿದೆ.
ಎಸ್ ಬಿಐ ಲೈಫ್ ತನ್ನ ಪಾಲಿಸಿಗಳ ಪ್ರೀಮಿಯಂ ನಲ್ಲಿ ಶೇ.30 ಏರಿಕೆ ದಾಖಲಿಸಿದ್ದು ಕಳೆದ ಸಾಲಿನಲ್ಲಿ 7,040 ಕೋಟಿ ರೂಪಾಯಿಗಳ ಪ್ರೀಮಿಯಂ ಸಂಗ್ರಹಿಸಿದೆ. ಐಸಿಐಸಿಐ ಪ್ರುಡೆನ್ಷಿಯಲ್ ನ ಹೊಸ ಪಾಲಿಸಿಗಳ ಆದಾಯದಲ್ಲಿ ಶೇ.7 ಕುಸಿತ ದಾಖಲಾಗಿದ್ದು 6,334 ಕೋಟಿ ರೂಪಾಯಿಗಳ ಪ್ರೀಮಿಯಂ ಸಂಗ್ರಹಿಸಿದೆ.
ಬಜಾಜ್ ಅಲಿಯಾನ್ಜ್ ಹೊಸ ಪಾಲಿಸಿಗಳ ಆದಾಯದಲ್ಲಿ ಅಲ್ಪ ಕಡಿಮೆಯಾಗಿದ್ದು ೪೪೫೦ ಕೋಟಿ ರೂಪಾಯಿಗಳ ಪ್ರೀಮಿಯಂ ಸಂಗ್ರಹಿಸಿದೆ. ಇದು ಹಿಂದಿನ ವರ್ಷ 4,491 ಕೋಟಿ ರೂಪಾಯಿಗಳ ಪ್ರೀಮಿಯಂ ಸಂಗ್ರಹಿಸಿತ್ತು. ಹೆಚ್ ಡಿ ಎಫ್ ಸಿ ಸ್ಟಾಂಡರ್ಡ್ ಲೈಫ್ ತನ್ನ ಹೊಸ ಪಾಲಿಸಿಗಳಲ್ಲಿ ಶೇ.23.3, ರಿಲಯನ್ಸ್ ಲೈಫ್ ಶೇ 12 ಹಾಗೂ ಬಿರ್ಲಾ ಸನ್ ಲೈಫ್ ಶೇ.4.75 ರಷ್ಟು ವೃದ್ದಿ ದಾಖಲಿಸಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications