15 ರ ನಂತರ ಸಿಬಿಎಸ್ಇ ಫಲಿತಾಂಶ
ಬೆಂಗಳೂರು,
ಮೇ. 11: ಬಹು ನಿರೀಕ್ಷಿತ ಸಿಬಿಎಸ್ಇ ಹತ್ತನೇ ತರಗತಿಯ ( 2010) ಫಲಿತಾಂಶಗಳು ಮೇ 15 ರ ನಂತರ ಪ್ರಕಟವಾಗಲಿವೆ. ದೇಶಾದ್ಯಂತ ನಾನಾ ಕೇಂದ್ರಗಳಲ್ಲಿ ಕಳೆದ ಮಾರ್ಚ್ ನಲ್ಲಿ ನಡೆದ ಪರೀಕ್ಷೆಗಳಿಗೆ ಸುಮಾರು 9.02 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. id="toptextpromo">ಕರ್ನಾಟಕ
ಪ್ರೌಢ ಪರೀಕ್ಷಾ ಶಿಕ್ಷಣ ಮಂಡಳಿಯ ಫಲಿತಾಂಶಗಳು ಈಗಾಗಲೇ ಪ್ರಕಟವಾಗಿದ್ದು ಸಿಬಿಎಸ್ಇ ಫಲಿತಾಂಶಗಳ ಪ್ರಕಟಣೆ ಮಾತ್ರ ತಡವಾಗಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತೀವ್ರ ಕಳವಳ ಉಂಟಾಗಿದೆ. ಫಲಿತಾಂಶ ಬರದ ಹೊರತು ಕಾಲೇಜು ಮತ್ತು ವಿಷಯ ಆಯ್ಕೆ ಮಾಡುವ ಹಾಗಿಲ್ಲ. ಇದು ವಿದ್ಯಾರ್ಥಿಗಳನ್ನು ಆತಂಕಕ್ಕೆ ಗುರಿಮಾಡಿದೆ. id='are-slot-1' class='oiad oi-axt oiadv'> id='top-searched-articles'>ಈ
ಬಾರಿಯ ಸಿಬಿಎಸ್ ಇ ಪರೀಕ್ಷೆಗಳಲ್ಲಿ ಗ್ರೇಡಿಂಗ್ ಪದ್ದತಿ ಜಾರಿಯಾಗಿದೆ. ಹೊಸ ಪದ್ದತಿಯ ಜಾರಿಯಿಂದ ಶೇಕಡಾವಾರು ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ. ಫಲಿತಾಂಶ ಪ್ರಕಟವಾಗುವ ವೆಬ್ ಸೈಟುಗಳು ಮತ್ತು ಸಮಯಕ್ಕಾಗಿ ನಿರೀಕ್ಷಿಸಿ.











Click it and Unblock the Notifications