ಫುಟ್ ಬಾಲ್ ಗೋಲ್ ಕೀಪರ್ ಆತ್ಮಹತ್ಯೆ!
ಬೆಂಗಳೂರು,
ಮೇ. 10 : ಪಿಯುಸಿ ಪರೀಕ್ಷೆಯಲ್ಲಿ ಫೇಲಾದೆ ಎಂಬ ಒಂದೇ ಒಂದು ಕಾರಣಕ್ಕೆ ರಾಷ್ಟ್ರೀಯ ಫುಟ್ ಬಾಲ್ ತಂಡದಲ್ಲಿ ಮಿಂಚಬೇಕಿದ್ದ ರಾಷ್ಟ್ರೀಯ ಕಿರಿಯರ ಫುಟ್ ಬಾಲ್ ತಂಡದ ಗೋಲ್ ಕೀಪರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ಬೆಂಗಳೂರಿನಲ್ಲಿ ನಡೆದಿದೆ. id="toptextpromo">ಉದಯೋನ್ಮುಖ
ಕ್ರೀಡಾಪಟು ಮಂಜುನಾಥ್(18) ಜೀವ ಕಳೆದುಕೊಂಡ ನತದೃಷ್ಟ ಹುಡುಗ. ಆತ ಮುಂದಿನ ತಿಂಗಳು ಕೊಲ್ಕತ್ತಾದಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಕಿರಿಯರ ಫುಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಆಡಬೇಕಾಗಿತ್ತು. ಆದರೆ, ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದು ಆತನಿಗೆ ಭರಿಸಲಾದ ನೋವು ಮತ್ತು ಅವಮಾನವಾಗಿತ್ತು. ಕ್ರೀಡೆಯಲ್ಲಿ ಮುಂದಿದ್ದ ಮಂಜನಾಥ್ ನಿಗೆ ಪರೀಕ್ಷೆಯಲ್ಲಿ ಹಿಂದೆ ಬಿದ್ದಿರುವುದು ಸಹಿಸಲು ಅಸಾಧ್ಯವಾದ ಸಂಗತಿಯಾಗಿತ್ತು. id='are-slot-1' class='oiad oi-axt oiadv'> id='top-searched-articles'>ನಗರದ
ಮೆಥಾಡಿಸ್ಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಕಾಲೇಜಿನ ಹೋಗಿ ಬರುವುದಾಗಿ ಹೇಳಿ ಪೋಷಕರಿಂದ 20 ರುಪಾಯಿಯನ್ನು ತೆಗೆದುಕೊಂಡು ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಿದ್ದ ಪ್ರತಿಭೆ ದುರಂತ ವಿದಾಯ ಕಂಡಿದ್ದು ಕ್ರೀಡಾ ಪ್ರೇಮಿಗಳಿಗೆ ನೋವಿನ ಸಂಗತಿಯೂ ಹೌದು.











Click it and Unblock the Notifications