ಗಣಿಗಾರಿಕೆ : ಬಳ್ಳಾರಿಯಲ್ಲಿ ಗೌಡರ ಕುಸ್ತಿ
ಬೆಂಗಳೂರು,
ಮೇ. 9 : ಗಣಿಗಾರಿಕೆ ವಿರುದ್ಧ ಬಹಿರಂಗವಾಗಿ ಸೆಡ್ಡು ಹೊಡೆದಿರುವ ಮಾಜಿ ದೇವೇಗೌಡ ಇದೀಗ ರೆಡ್ಡಿ ಸಹೋದರರ ಅಕ್ರಮಗಳ ವಿರೋಧಿಸಿ ಬಳ್ಳಾರಿಯಲ್ಲೇ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅಲ್ಲದೆ, ರೆಡ್ಡಿ ಸಹೋದರರು ಬಳ್ಳಾರಿ ಸುತ್ತವಿರುವ ಸುಮಾರು 48 ಗಣಿ ಮಾಲೀಕರನ್ನು ಬೆದರಿಸಿ ಅವರಿಂದ ಅದಿರು ಕಪ್ಪವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಗೌಡ ಅಪಾದಿಸಿದರು. id="toptextpromo">ಶನಿವಾರ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೆಡ್ಡಿ ಸಹೋದರರು ಇತ್ತೀಚೆಗೆ ಜಿಲ್ಲೆಯ ರಾಮಗಡ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಆರಂಭಿಸಿದ್ದಾರೆ. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಪ್ರತಿನಿತ್ಯ ರಾಮಗಡ ಪ್ರದೇಶಕ್ಕೆ ಸೇರಿದ 10 ರಿಂದ 15 ಸಾವಿರ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ ಎಂದರು. id='are-slot-1' class='oiad oi-axt oiadv'> id='top-searched-articles'>ವಾರದಿಂದ
ರಾಮಗಡದಲ್ಲಿ ಅಕ್ರಮ ಗಣಿಗಾರಿಕೆ ಆರಂಭಿಸಿರುವ ರೆಡ್ಡಿ ಸಹೋದರರು ಅಲ್ಲಿಂದ ಅದಿರನ್ನು ಚೆನ್ನೈ, ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಬಂದರಿಗೆ ಸಾಗಿಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.











Click it and Unblock the Notifications