ನಾಯಕ್ ವಿರುದ್ಧ ಪುಟ್ಟಸ್ವಾಮಿ ಧಮಕಿ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಯೋಗದ ಅಧ್ಯಕ್ಷರಿಗೆ ಸಂವಿಧಾನ ನೀಡಿರುವ ಕೆಲಸದಂತೆ ಮೊಕದ್ದಮೆ ವಿಚಾರಣೆ ನಡೆಸಿ ತೀರ್ಪು ನೀಡಬೇಕು. ಅದನ್ನು ಬಿಟ್ಟು ರಾಜಕಾರಣಿಯಂತೆ ಮತ್ತು ವಿರೋಧ ಪಕ್ಷಗಳ ನಾಯಕರಂತೆ ಹೇಳಿಕೆ ನೀಡಬಾರದು. ಇದು ಅವರ ವೃತ್ತಿಗೆ ಶೋಭೆ ತರುವುದಿಲ್ಲ ಎಂದರು.
ಮೂರು ದಶಕಗಳ ಕಾಲ ಹೋರಾಟದ ಮೂಲಕ ಜನಮನ್ನಣೆ ಗಳಿಸಿರುವ ಒಬ್ಬ ಮುಖ್ಯಮಂತ್ರಿಯನ್ನು ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸಿರುವುದು ಮತ್ತು ಮುಖ್ಯಮಂತ್ರಿಯನ್ನು ಅತ್ಯಂತ ಕೀಳು ಮಟ್ಟದಲ್ಲಿ ಟೀಕಿಸುತ್ತಿರುವುದು ನಾಯಕ್ ಅವರಿಗೆ ಇರುವ ದ್ವೇಷವನ್ನು ತೋರಿಸುತ್ತದೆ ಎಂದು ಪುಟ್ಟಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಮೊದಲ ಪತ್ನಿ ಮತ್ತು ಮಕ್ಕಳ ಸಹಮತದಿಂದ ವಿಜಯಲಕ್ಷ್ಮಿಯನ್ನು ಮದುವೆಯಾದದ್ದು ನಿಜ. ಮತ್ತೆ ಬೇರ್ಪಟ್ಟಿದ್ದೂ ಹೌದು. ವಿಜಯಲಕ್ಷ್ಮಿಗೆ ನಾನು ವಂಚನೆ ಮಾಡಿದ್ದೇನೆ ಎನ್ನುವುದು ಸುಳ್ಳು. ನಮ್ಮ ವೈವಾಹಿಕ ಸಂಬಂಧ ಕೇವಲ ಮಾತುಕತೆ ಮೂಲಕವೇ ಮುರಿದು ಬಿದ್ದಿದೆ ಎಂದು ಪುಟ್ಟಸ್ವಾಮಿ ಹೇಳಿದ್ದಾರೆ. ಆ ಮದ್ಯೆ ವಿಜಯಲಕ್ಷ್ಮಿ ಅವರು, ಗುರುವಾರ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದಾರೆ.












Click it and Unblock the Notifications