ಅಲ್ಪಸಂಖ್ಯಾತರ ಮೀಸಲಾತಿ ಏಕೆ ? ತೊಗಾಡಿಯಾ
ಬೆಂಗಳೂರು,
ಮೇ. 5 : ಮುಸ್ಲಿಂ ಮತ್ತು ಕ್ರಿಸ್ಚಿಯನ್ ರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ತೀವ್ರವಾಗಿ ವಿರೋಧಿಸಿದ್ದಾರೆ. ಸರಕಾರದ ಈ ಕ್ರಮ ಹಿಂದೂ ಯುವಕರಿಗೆ ತೀವ್ರ ಅನ್ಯಾಯವಾಗಿದೆ ಅವರ ಕಳವಳ ವ್ಯಕ್ತಪಡಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರದ ಈ ಕ್ರಮವನ್ನು ವಿರೋಧಿಸಿ ದೇಶಾದ್ಯಂತ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದರು. ಧರ್ಮಾಧಾರಿತ ಮೀಸಲಾತಿ ನೀಡುವುದು ಕಾನೂನು ಬಾಹಿರ. ಹೀಗಿದ್ದರೂ, ಈ ವಿಚಾರದಲ್ಲಿ ಕೇಂದ್ರ ದಾರಿ ತಪ್ಪಿರುವುದು ಅಚ್ಚರಿ ಮೂಡಿಸಿದೆ. ಈ ಕಾರಣದಿಂದಲೇ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಅವರ ಮೂಲಕವೇ ರಾಷ್ಟ್ರಪತಿ ಹಾಗಬ ಪ್ರಧಾನಿಗಳ ಗಮನ ಸೆಳೆಯಲಾಗುವುದು ಎಂದರು. id='are-slot-1' class='oiad oi-axt oiadv'> id='top-searched-articles'>ಪ್ರಧಾನಿ
ಮನಮೋಹನ್ ಸಿಂಗ್ ಅವರು ಮೊಹ್ಮದ್ ಅಲಿ ಜಿನ್ನಾ ಮಾದರಿಯಲ್ಲಿ ಮುಸ್ಲಿಂರಿಗೆ ಉತ್ತೇಜನ ನೀಡುತ್ತಿದ್ದಾರೆ. ಕುಟುಂಬ ಕಲ್ಯಾಣ ಯೋಜನೆ ಕೇವಲ ಹಿಂದೂಗಳಿಗೆ ಸೀಮಿತವಾಗಿದೆ. ತಮ್ಮ ಜನ ಸಂಖ್ಯೆ ಹೆಚ್ಚಿಸಿಕೊಳ್ಳುವುದೇ ಮುಸ್ಲಿಂರ ಮೂಲ ಉದ್ದೇಶ. ಇದು ಭಾರತದ ಆರ್ಥಿಕತೆಗೆ ಧಕ್ಕೆಯುಂಟು ಮಾಡಲಿದೆ ಎಂದು ತೊಗಾಡಿಯಾ ವಿವರಿಸಿದರು.











Click it and Unblock the Notifications