ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂನಿಕೋಡ್ ಗೆ ಜೈ ಹೋ ಎಂದ ತಮಿಳರು

By Mahesh
|
Google Oneindia Kannada News

Policy on e-governance soon, says TN Minister
ಚೆನ್ನೈ,ಮೇ.3:ದೇಶದ ಐಟಿ ರಾಜಧಾನಿ ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇನ್ನೂ ಇ ಆಡಳಿತ ಅನುಷ್ಠಾನ ಮಟ್ಟ ತಲುಪಲು ಹೆಣಗಾಡುತ್ತಿರುವ ಹೊತ್ತಿನಲ್ಲೇ, ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ಹಾಗೂ ಅನುಷ್ಠಾನ ಕುರಿತು ಕಾನೂನು ರೂಪಿಸುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಅಲ್ಲಿನ ಆಡಳಿತ ಯೂನಿಕೋಡ್ ಫಾಂಟ್ ಬಳಕೆ ಕಡ್ಡಾಯ ಮಾಡುವ ಪ್ರಮುಖ ನಿರ್ಣಯ ಕೈಗೊಂಡಿದೆ.

ತಮಿಳುನಾಡಿನ ವಿಧಾನಸಭೆಯಲ್ಲಿ ಈಬಗ್ಗೆ ಸೋಮವಾರ ವಿವರ ನೀಡಿದ ಅಲ್ಲಿನ ಐಟಿ ಸಚಿವ ಪಿ ಎ ಅರುಣಾ ಅವರು, ಮಾಹಿತಿ ಸುರಕ್ಷತಾ ನಿಯಮ, ಇ ಆಡಳಿತ ಹಾಗೂ ಇ ತ್ಯಾಜ್ಯ ನಿರ್ವಹಣೆ ಬಗ್ಗೆ ತಮ್ಮ ಇಲಾಖೆ ಕಾರ್ಯಸೂಚಿಗಳನ್ನು ರೂಪಿಸುತ್ತಿದ್ದು, ಸದ್ಯದಲ್ಲೇ ಕಾನೂನು ರೂಪದಲ್ಲಿ ಮಂಡಿಸಲಾಗುವುದು. ಇ ಅನ್ವಯ ತಂತ್ರಾಂಶ ರೂಪಿಸಿ ಮೊದಲಿಗೆ ರಾಜ್ಯ ಸಚಿವಾಲಯ ಕಚೇರಿಯಲ್ಲಿ ಬಳಕೆ ಮಾಡಲಾಗುವುದು ನಂತರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಈ ವ್ಯವಸ್ಥೆ ವಿಸ್ತರಿಸಲಾಗುವುದು ಎಂದರು.

ಲಿಪಿ ಸಮಸ್ಯೆಗೆ ಪರಿಹಾರ:ತಮಿಳುನಾಡಿನ ಬಹುತೇಕ ಎಲ್ಲಾ ಕಚೇರಿಗಳ ಕಂಪ್ಯೂಟರ್ ಗಳಲ್ಲಿ ತಮಿಳು ಲಿಪಿಯನ್ನು ಬಳಸಲಾಗುತ್ತಿದ್ದು, ಏಕರೂಪದ ಮಾನದಂಡ ಅನುಸರಿಸುತ್ತಿಲ್ಲ. ಈ ಸಮಸ್ಯೆಯ ಪರಿಹಾರಕ್ಕಾಗಿ ಅಂತರ್ಜಾಲದಲ್ಲಿ ತಮಿಳು ಬಳಕೆ ವಿಸ್ತಾರಗೊಳಿಸುವ ಉದ್ದೇಶದಿಂದ ಹಾಗೂ ಏಕರೂಪದ ಮಾನದಂಡ ಉಳ್ಳ ಲಿಪಿ ಬಳಸಲು ಎಲ್ಲೆಡೆ ಯೂನಿಕೋಡ್ ಲಿಪಿ ಬಳಕೆ ಕಡ್ಡಾಯಗೊಳಿಸಲಾಗುವುದು.

ಉಚಿತವಾಗಿ ದೊರೆಯುವ ಫಾಂಟ್(ಲಿಪಿ)ಗಳ ಬಳಕೆಯಿಂದ ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕರಿಗೆ ವ್ಯವಹಾರ ಮಾಡಲು ಸುಲಭವಾಗಲಿದೆ. ಒಟ್ಟಾರೆಯಾಗಿ ಸರ್ಕಾರಿ ಸೇವೆಗಳು ಸಾರ್ವಜನಿಕರಿಗೆ ತಲುಪಲು ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆ ಕಲ್ಪಿಸಲು ಇ ಆಡಳಿತ ಅತ್ಯಗತ್ಯ. ಯೂನಿಕೋಡ್ ಕಡ್ಡಾಯ ಇದಕ್ಕೆ ಪೂರಕ ಎಂದು ಅರುಣಾ ಘೋಷಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X