ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿಗಳಿಗೂ ಉಂಟು ಬ್ಲಡ್ ಬ್ಯಾಂಕು

By Mahesh
|
Google Oneindia Kannada News

First blood bank for Dogs
ಚೆನ್ನೈ,ಮೇ.3: ಮನುಷ್ಯರಿರಲಿ, ಪ್ರಾಣಿಗಳಿರಲಿ, ರಕ್ತ ನಷ್ಟವಾದಾಗ ರಕ್ತದಾನಿಗಳ ಹುಡುಕುವ ಕಷ್ಟ ಹೇಳತೀರದು. ಪ್ರಾಣಿಗಳಿಗೂ ಒಂದು ಬ್ಲಡ್ ಬ್ಯಾಂಕ್ ಆರಂಭಿಸುವ ಯೋಜನೆ ಹಾಕಿಕೊಂಡ ತಮಿಳುನಾಡಿನ ಪಶು ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ, ದೇಶದಲ್ಲೇ ಪ್ರಥಮ ಬಾರಿಗೆ ನಾಯಿಗಳಿಗಾಗಿ ಪ್ರತ್ಯೇಕ ಬ್ಲಡ್ ಬ್ಯಾಂಕ್ ಆರಂಭಿಸಿದೆ.

ಪಶು ಸಂಗೋಪನಾ ವಿವಿಯಲ್ಲಿ ಹೈಟೆಕ್ ಸೌಲಭ್ಯವಿರುವ ಘಟಕಗಳಲ್ಲಿ ರಕ್ತ ಶೇಖರಣೆ ಮಾಡಲಾಗಿದೆ. ಈಗಾಗಲೇ 28 ದಾನಿಗಳು ಹೆಸರು ನೋಂದಾಯಿಸಿದ್ದಾರೆ. ಇಲ್ಲಿ ಶೇಖರಣೆಗೊಂಡ ರಕ್ತವನ್ನು ಗಾಯಾಳು ನಾಯಿಯೊಂದರ ದೇಹಕ್ಕೆ ಯಶಸ್ವಿಯಾಗಿ ರಕ್ತ ಪೂರೈಕೆ ಮಾಡಲಾಗಿದೆ ಎಂದು ವಿವಿಯ ಉಪ ಕುಲಪತಿ ಡಾ. ಪಿ ತಂಗರಾಜು ಸುದ್ದಿಗಾರರಿಗೆ ತಿಳಿಸಿದರು.

ಒಟ್ಟಾರೆಯಾಗಿ ನಾಯಿಗಳಲ್ಲಿ 8 ರಿಂದ 12 ಬಗೆಯ ರಕ್ತದ ಗುಂಪುಗಳಿವೆ. ಗರ್ಭ ಧರಿಸಿರದ ಆರೋಗ್ಯವಂತ ನಾಯಿಗಳು ರಕ್ತದಾನ ಮಾಡಲು ಅರ್ಹವಾಗಿರುತ್ತದೆ. DEA1.1-ve ಮಾದರಿ ಗುಂಪಿನ ರಕ್ತಕ್ಕೆ ಬೇಡಿಕೆ ಜಾಸ್ತಿ. ಒಮ್ಮೆಗೆ ಸುಮಾರು 450 ಮಿಲಿ ಲೀಟರ್ ನಷ್ಟು ರಕ್ತವನ್ನು ದಾನಿಯಿಂದ ಪಡೆಯಲಾಗುತ್ತದೆ. ನಂತರ ದಾನಿ ಹಾಗೂ ರೋಗಿಯ ರಕ್ತಕಣ, ಕೆಂಪು ರಕ್ತಕಣಗಳ ಪರೀಕ್ಷೆ ನಡೆಸಲಾಗುವುದು. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ರೀತಿಯ ಪ್ರಾಣಿ ರಕ್ತಶೇಖರಣಾ ಘಟಕಗಳು ಹೆಚ್ಚಾದರೆ, ಪ್ರಾಣಿಗಳನ್ನು ಅಕಾಲಿಕ ಮರಣದಿಂದ ಉಳಿಸಬಹುದು ಎನ್ನುತ್ತಾರೆ ತಂಗರಾಜ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X