ಮಂತ್ರಿಯಿಂದ ಸ್ನೇಹಿತನ ಪತ್ನಿಯ ಮಾನಭಂಗ

ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲೇ ಈ ಪ್ರಕರಣ ನಡೆದಿದೆ. ಮುಖ್ಯಮಂತ್ರಿಗೆ ಆಪ್ತರಾದ ಹರತಾಳು ಹಾಲಪ್ಪ ಪ್ರಕರಣದ ಕೇಂದ್ರ ಬಿಂದು. ಸಚಿವರ ಸ್ನೇಹಿತರೂ ಆಗಿರುವ ಶಿವಮೊಗ್ಗದ ಸಮಾಜ ಸೇವಕರೊಬ್ಬರ ಪತ್ನಿ ಸಚಿವರ ಕಾಮತೃಷೆಗೆ ಬಲಿಯಾಗಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಸಚಿವ ಹಾಲಪ್ಪ ರಾಜೀನಾಮೆ ನೀಡಿದರೆ ಸಾಲದು, ಯಡಿಯೂರಪ್ಪ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಸರಕಾರಕ್ಕೆ ಮುಜುಗರ ತರಬಾರದು ಎಂಬ ಕಾರಣದಿಂದ ಮಂತ್ರಿ ಸ್ಥಾನಕ್ಕೆ ಹಾಲಪ್ಪ ರಾಜೀನಾಮೆ ನೀಡಿದ್ದಾರೆ. ಪ್ರಕಕರಣದ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.











Click it and Unblock the Notifications