ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುರಾಷ್ಟ್ರೀಯ ಕಂಪನಿ : ಚೀನಾ ಮೀರಿಸಲಿದೆ ಭಾರತ

By Prasad
|
Google Oneindia Kannada News

Multinational companies : India to overtake China in 2024
ನವದೆಹಲಿ, ಏ. 30 : ಮುಂದಿನ ದಶಕದಲ್ಲಿ ಭಾರತ ಅತೀ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಲಿದ್ದು, ಆರ್ಥಿಕವಾಗಿ ಸದೃಢವಾಗಿರುವ ವಿಶ್ವದ 15 ದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸಂಬಂಧಿಸಿದಂತೆ ಅಗ್ರಸ್ಥಾನ ತಲುಪಲಿದೆ ಎಂದು ಪ್ರೈಸ್ ವಾಟರ್ ಹೌಸ್ ಕೂಪರ್ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.

ವರದಿ ಪ್ರಕಾರ ಪ್ರಸ್ತುತ ಚೀನಾ 141 ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಿದ್ದು , 2018ರಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಲು ನಾನಾ ದೇಶದ ಕಂಪನಿಗಳು ನಾಮುಂದು ತಾಮುಂದು ಎಂಬು ಬರುತ್ತಿವೆ. ಭಾರತದಲ್ಲಿ ಹೂಡಿಕೆ ಸಾಂದ್ರತೆ ಹೆಚ್ಚಿರುವುದರಿಂದ ಹಾಗೂ ಹೂಡಿಕೆ ಸುಲಲಿತವಾಗಿರುವುದರಿಂದ ಚೀನಾವನ್ನು ಹಿಂದಿಕ್ಕಲು ಸಹಾಯವಾಗಲಿದೆ.

ಮುಂದಿನ 15 ವರ್ಷಗಳಲ್ಲಿ ಕನಿಷ್ಠ 2200 ಭಾರತೀಯ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಆಸ್ತಿತ್ವ ಬೆಳೆಸಿಕೊಳ್ಳಲಿವೆ ಎಂದೂ ವರದಿ ಹೇಳಿದೆ. ಹೊಸ ಬಹುರಾಷ್ಟ್ರೀಯ ಕಂಪನಿಗಳಲ್ಲಿ 2024ಕ್ಕೆ ಭಾರತ ಚೀನಾಕ್ಕಿಂತ ಶೇ.20ರಷ್ಟು ಅಧಿಕ ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಲಿದೆ ಎಂದು ವರದಿ ಹೇಳಿದೆ.

ಹೊಸ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹೆಚ್ಚಿನವು ವ್ಯಾಪಾರ ಸೇವೆ, ಟೆಲಿಕಾಮ್, ಮಾಹಿತಿ ತಂತ್ರಜ್ಞಾನ ಮತ್ತು ಉತ್ಪಾದನಾ ವಲಯದ ಕಂಪನಿಗಳಾಗಲಿವೆ. 2025ಕ್ಕೆ ದಕ್ಷಿಣ ಕೊರಿಯಾ, ಮಲೇಷ್ಯಾ, ರಷ್ಯಾ ಮತ್ತು ಸಿಂಗಪುರದ ಹೊಸ ಬಹುರಾಷ್ಟ್ರೀಯ ಕಂಪನಿಗಳ ಪಾಲು ಶೇ.36ರಷ್ಟಿರಲಿದೆ ಎಂದು ಸಮೀಕ್ಷೆ ಹೇಳಿದೆ. ದಕ್ಷಿಣ ಅಮೇರಿಕಾದ ದೇಶಗಳಲ್ಲಿ ಅರ್ಜೆಂಟೀನಾ, ಬ್ರೆಜಿಲ್, ಚಿಲಿ ಹಾಗೂ ಮೆಕ್ಸಿಕೊ ದೇಶಗಳ ಬಹುರಾಷ್ಟೀಯ ಕಂಪನಿಗಳ ಪಾಲು ಕಡಿಮೆಯಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X