ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಬ್ರಾಂಡ್ ಗಳಲ್ಲಿ ಐಸಿಐಸಿಐಗೆ 45 ನೇ ಸ್ಥಾನ

By Mahesh
|
Google Oneindia Kannada News

ICICI Bank ranked 45th most valuable brand in world
ಚಿಕಾಗೋ,ಏ.29: ದೇಶದ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಐಸಿಐಸಿಐ ವಿಶ್ವದ 100 ಪ್ರತಿಷ್ಠಿತ ಬ್ರಾಂಡ್ ಗಳಲ್ಲಿ 45 ನೇ ಸ್ಥಾನ ಪಡೆದಿದೆ. ಅಮೇರಿಕಾದ ಮಿಲ್ ವಾಡ್ ಬ್ರೌನ್ ಆಪ್ಟಿಮಿರ್ ಸಂಸ್ಥೆ ಯು ಬಂಡ್ಜ್ ಟಾಪ್ 100 ಎಂಬ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಗೂಗಲ್ ಗೆ ಮೊದಲನೇ ಸ್ಥಾನ ದೊರೆತಿದೆ.

14.5 ಬಿಲಿಯನ್ ಡಾಲರ್ ಗಳಷ್ಟು ಬ್ರಾಂಡ್ ಮೌಲ್ಯ ಹೊಂದಿರುವ ಐಸಿಐಸಿಐ ಬ್ರಾಂಡ್ಜ್ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಬ್ಯಾಂಕ್ ಆಗಿದೆ. ಭಾರತದಲ್ಲಿ ರಿಟೇಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಐಸಿಐಸಿಐ, ದೇಶದ ಬೆಳವಣಿಗೆಯ ಜತೆಯಲ್ಲೇ ಉತ್ತಮ ಲಾಭ ಗಳಿಸಿ ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಬ್ರಾಂಡ್ಜ್ ಹೇಳಿದೆ .

ಪ್ರಸ್ತುತ ದೇಶಾದ್ಯಂತ 5000 ಎಟಿಎಂಗಳನ್ನು ಐಸಿಐಸಿಐ ಹೊಂದಿದೆ. 18 ದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದು, ವಿಶ್ವದ ಪ್ರಮುಖ 20 ಹಣಕಾಸು ಸಂಸ್ಥೆಗಳ ಬ್ರಾಂಡ್ ಗಳಲ್ಲಿ 10ನೇ ಸ್ಥಾನ ಪಡೆದಿದೆ. ಈ ಬ್ರಾಂಡ್ ಗಳ ಪಟ್ಟಿಯಲ್ಲಿ ದೇಶದ ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್ ಕೂಡ ತಂತ್ರಜ್ಞಾನ ವಿಭಾಗದಲ್ಲಿ ಸ್ಥಾನ ಪಡೆದಿದೆ. 100 ಬ್ರಾಂಡ್ ಗಳ ಹೊರಗೆ ಇನ್ಫೋಸಿಸ್ ಇದ್ದು 6.4 ಬಿಲಿಯನ್ ಡಾಲರ್ ಗಳ ಬ್ರಾಂಡ್ ಮೌಲ್ಯ ಹೊಂದಿದ್ದು ಶೀಘ್ರ 100 ರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎನ್ನಲಾಗಿದೆ.

ವಿಶ್ವದ ಪ್ರಮುಖ 20 ತಂತ್ರಜ್ಞಾನ ಬ್ರಾಂಡ್ ಗಳ ಪೈಕಿ ಇನ್ಫೋಸಿಸ್ 18 ನೇ ಸ್ಥಾನ ಪಡೆದಿದೆ. 114 ಬಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಹೊಂದಿರುವ ಗೂಗಲ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಐಬಿಎಂ 86 ಬಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಹೊಂದಿದ್ದು ಎರಡನೇ ಮತ್ತು 83 ಬಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಹೊಂದಿರುವ ಆಪಲ್ ಮೂರನೇ ಸ್ಥಾನದಲ್ಲಿದೆ. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ತಂತ್ರಜ್ಞಾನ ವಿಭಾಗದಲ್ಲಿ ಸ್ಥಾನ ಪಡೆದಿದ್ದು 5.5 ಬಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಹೊಂದಿದೆ.

ಟಾಪ್ 10 ಪಟ್ಟಿಯಲ್ಲಿ ಕೋಕಾ ಕೋಲ , ಮೆಕ್ ಡೊನಾಲ್ಡ್ಸ್ , ಚೀನಾ ಮೊಬೈಲ್ , ಜಿ ಇ ಮತ್ತು ವೋಡಾಫೋನ್ ಸೇರಿವೆ. ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ಕಂಪೆನಿಗಳೆಂದರೆ ಹೆಚ್ ಪಿ(12), ಬ್ಲಾಕ್ ಬೆರ್ರಿ(14), ಹೆಚ್ ಎಸ್ ಬಿಸಿ (23), ಬಿಎಮ್ ಡಬ್ಲ್ಯೂ(25), ಟಯೋಟಾ(26), ಲೂಯಿಸ್ ವುಟ್ಟನ್(29), ಎಕ್ಸಾನ್ ಮೊಬಿಲ್(39), ನೋಕಿಯಾ(43), ಹೋಂಡಾ(46), ಪೆಪ್ಸಿ (58), ಸೋನಿ(94), ಗುಸ್ಸಿ(97) ಸ್ಥಾನದಲ್ಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X