ರೈಲ್ವೆ ಕೋಟಾ ಪದ್ಧತಿ ಇಲ್ಲ : ಖುರಾನಾ
ಮೈಸೂರು,
ಏ. 27 : ರೈಲ್ವೆ ಇಲಾಖೆಯಲ್ಲಿ ನಡೆಯುವ ನೇಮಕ ಪ್ರಕ್ರಿಯೆಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಇಲಾಖೆ ತಯಾರಿ ನಡೆಸಲಾಗಿದೆ ಎಂದು ಕೇಂದ್ರ ರೈಲ್ವೆ ಮಂಡಳಿ ಅಧ್ಯಕ್ಷ ಎಸ್ ಎಸ್ ಖುರಾನಾ ಸ್ಪಷ್ಟಪಡಿಸಿದರು. id="toptextpromo">ನಗರದ
ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈಲ್ವೆ ಇಲಾಖೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಕೋಟಾ ಪದ್ಧತಿ ಸಾಧ್ಯವಿಲ್ಲ ಎಂದರು. ಆದರೆ, ಸ್ಥಳೀಯ ಉದ್ಯೋಗ ಆಕಾಂಕ್ಷಿಗಳು ಹೊರ ರಾಜ್ಯಗಳಿಗೆ ತೆರಳಿ ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಅಖಿಲ ಭಾರತ ಮಟ್ಟದಲ್ಲಿ ಏಕಕಾಲಕ್ಕೆ ಆಯಾ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಕಳೆದ
ಕೆಲ ವರ್ಷಗಳಿಂದ ಕನ್ನಡಪರ ಸಂಘಟನೆಗಳು ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ವಿಶೇಷ ಅಧ್ಯತೆ ನೀಡಬೇಕು ಎಂದು ನಡೆಸುತ್ತಿರುವ ಹೋರಾಟಕ್ಕೆ ಹಿನ್ನೆಡೆ ಉಂಟಾಗಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಅಧ್ಯತೆ ನೀಡಬೇಕು ಎನ್ನುವುದು ಹೋರಾಟದ ಪ್ರಮುಖ ಧ್ಯೇಯವಾಗಿದೆ.











Click it and Unblock the Notifications