ಫೋನ್ ಕದ್ದಾಲಿಕೆ ಆರೋಪ ನಿರಾಧಾರ
ಶಿವಮೂಗ್ಗ,
ಏ. 26 : ಸರಕಾರ ಮುಖಂಡರ ದೂರವಾಣಿಯನ್ನು ಕದ್ದಾಲಿಕೆ ಮಾಡುತ್ತಿದೆ ಎಂಬ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೇಕಾದರೆ ಕುಮಾರಸ್ವಾಮಿ ನೇತೃತ್ವದಲ್ಲಿಯೇ ತನಿಖಾ ಸಮಿತಿಯನ್ನು ರಚಿಸೋಣ ಎಂದು ಸವಾಲು ಹಾಕಿದರು. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಟೆಲಿಫೋನ್ ಕದ್ದಾಲಿಕೆ ಮಾಡಿ ಅನುಭವವಿರುವಂತೆ ಮಾತನಾಡುತ್ತಿದ್ದಾರೆ ಎಂದರು. ಕಾವೇರಿ ನ್ಯಾಯಾಧೀಕರಣಕ್ಕೆ ಗೌರವ ನೀಡಿ ಅದರ ಅಂತಿಮ ವರದಿ ಬರುವ ತನಕ ಉದ್ದೇಶಿತ ದಂಡಾವತಿ ಯೋಜನೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುವುದು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಒಳ್ಳೆಯ ನೀರಾವರಿ ಯೋಜನೆಗೆ ಕಲ್ಲು ಹಾಕಿದರು ಎಂದು ಮತ್ತೊಮ್ಮೆ ಕಿಡಿಕಾರಿದರು. id='are-slot-1' class='oiad oi-axt oiadv'> id='top-searched-articles'>ಹೊಗೇನಕಲ್
ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಅಧಿವೇಶನ ನಡೆಯುತ್ತಿದ್ದು, ನಂತರ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳುವುದಾಗಿ ಅವರು ಹೇಳಿದರು. ಜಿಂದಾಲ್ ಕಂಪನಿ ತಯಾರಿಸುತ್ತಿರುವ ವಿದ್ಯುತ್ ನ್ನು ಸುಪ್ರಿಂಕೋರ್ಟ್ ಆದೇಶದ ಮೇರೆಗೆ ಕರ್ನಾಟಕ, ತಮಿಳುನಾಡು ಹಂಚಿಕೊಳ್ಳಲಿವೆ ಎಂದು ಯಡಿಯೂರಪ್ಪ ವಿವರಿಸಿದರು.











Click it and Unblock the Notifications