ರಾಜ್ಯಕ್ಕೆ ಪ.ಜಾತಿ ಅಧ್ಯಕ್ಷ ಬೂಟಾಸಿಂಗ್
ಬೆಂಗಳೂರು,
ಏ. 26 : ರಾಷ್ಟ್ರೀಯ ಪರಿಶಿಷ್ಠ ಜಾತಿ ಆಯೋಗದ ಅಧ್ಯಕ್ಷ ಡಾ.ಬೂಟಾಸಿಂಗ್, ಉಪಾಧ್ಯಕ್ಷ ಪ್ರೊ.ಎಂ.ಎನ್.ಕಾಂಬ್ಳೆ ಮತ್ತು ಆಯೋಗದ ಸದಸ್ಯರು ಹಾಗೂ ಅಧಿಕಾರಿಗಳು ಇಂದು ಸಂಜೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. id="toptextpromo">ಅವರು
ಏಪ್ರಿಲ್ 27 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯದ ಪರಿಶಿಷ್ಠ ಜಾತಿಗೆ ಸೇರಿದ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಸದಸ್ಯರುಗಳು ಹಾಗೂ ರಾಜ್ಯ ಸರ್ಕಾರೀ ಮತ್ತು ಸರ್ಕಾರೀ ಸ್ವಾಮ್ಯದ ಸಂಸ್ಥೆಗಳ ಪ.ಜಾತಿ ನೌಕರರುಗಳ ಸಂಘದ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ಆ ನೌಕರರುಗಳ ಸಮಸ್ಯೆ, ಕುಂದುಕೊರತೆ ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅದೇ
ದಿನ ಮಧ್ಯಾಹ್ನ 3 ಗಂಟೆಗೆ ರಾಜ್ಯದ ಸಮಾಜ ಕಲ್ಯಾಣ ಸಚಿವರಾದ ಡಿ ಸುಧಾಕರ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಪ.ಜಾತಿ ಜನರ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿಯೇ ಸಭೆ, ಸಮಾಲೋಚನೆ ನಡೆಸಲಿದ್ದಾರೆ.











Click it and Unblock the Notifications