ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಇಂಟರ್ನೆಟ್ಟಿಗೆ ಆಮೆ ವೇಗ!

By Prasad
|
Google Oneindia Kannada News

Hi speed internet service affected in India
ಬೆಂಗಳೂರು, ಏ. 26 : ನಿಮಗೆ ದಟ್ಸ್ ಕನ್ನಡದ ವೆಬ್ ಪುಟಗಳು ತೆರೆಯಲು ವಿಳಂಬವಾಗುತ್ತಿದೆಯೆ? ಅಥವಾ ಮತ್ತಾವುದೇ ಅಂತರ್ಜಾಲ ತಾಣದ ಪುಟ ಪೂರ್ತಿಯಾಗಿ ಡೌನ್ ಲೋಡ್ ಆಗಲು ಸಮಯ ತೆಗೆದುಕೊಳ್ಳುತ್ತಿದೆಯೆ? ಮೊಲದ ವೇಗದಲ್ಲಿ ತೆರೆದುಕೊಳ್ಳುತ್ತಿದ್ದ ಪುಟ ಆಮೆವೇಗದಲ್ಲಿ ತೆರೆಯುತ್ತಿದೆಯೆ? Why this pain?

ಇದು ದಟ್ಸ್ ಕನ್ನಡ ಅಥವಾ ಮತ್ತಾವುದೇ ವೆಬ್ ಪುಟಗಳ ಪರಿಸ್ಥಿತಿ ಮಾತ್ರವಲ್ಲ. ಇಡೀ ಭಾರತದಲ್ಲಿ ಏಪ್ರಿಲ್ ಕೊನೆಯ ವಾರದಲ್ಲಿ ಇಂಟರ್ನೆಟ್ ವೇಗ ತೀರ ನಿಧಾನವಾಗಿದೆ. ಭಾರತದಾದ್ಯಂತ ಹೈಸ್ಪೀಡ್ ಇಂಟರ್ನೆಟ್ ಬಳಸುವ ನೆಟ್ಟಿಗರಿಗೆ ಇದು ಅನುಭವಕ್ಕೆ ಬಂದಿರುತ್ತದೆ. ಪುಟ ಸರಿಯಾಗಿ ತೆರೆದುಕೊಳ್ಳದೆ ನೆಟ್ಟಿಗರ ಸಹನೆ ಪರೀಕ್ಷಿಸುತ್ತಿರುತ್ತದೆ. ಕೆಲವೇ ಸೆಕೆಂಡುಗಳಲ್ಲಿ ತೆರೆಯುವ ಪುಟ ನಾಲ್ಕಾರು ನಿಮಿಷವಾದರೂ ತೆರೆದುಕೊಳ್ಳದೆ ಸತಾಯಿಸುತ್ತಿರುತ್ತದೆ.

ಹೌದು, ಏಷ್ಯಾ, ಯುರೋಪ್ ರಾಷ್ಟ್ರಗಳಲ್ಲಿ ನೆಟ್ ಸಂಚಾರ ಸಂಪೂರ್ಣ ಅಲ್ಲದಿದ್ದರೂ ಭಾಗಶಃ ಅಸ್ತವ್ಯಸ್ತವಾಗಿದೆ. ಇದು ಯಾವುದೇ ವೈರಸ್ ಆಕ್ರಮಣದಿಂದ ಆಗಿರುವ ಪರಿಣಾಮವಲ್ಲ. ಇದಕ್ಕೆ ಕಾರಣ ಸಮುದ್ರತಳದಲ್ಲಿರುವ ಇಂಟರ್ನೆಟ್ ವ್ಯವಸ್ಥೆ ಕೈಕೊಟ್ಟಿರುವುದು. ಭಾರತದ ಮುಖಾಂತರ ಆಗ್ನೇಯ ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಜೋಡಿಸುವ SEA-ME-WE 4 (South East Asia-Middle East-West Europe 4) ಸಬ್ ಮರೈನ್ ಕೇಬಲ್ ವ್ಯವಸ್ಥೆ ದುರಸ್ಥಿಯಲ್ಲಿದೆ. ಇದು ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ವ್ಯವಸ್ಥೆಗೆ ಧಕ್ಕೆ ತಂದಿದೆ.

ಭಾರತಿ ಏರ್ ಟೆಲ್ ಮತ್ತು ಟಾಟಾ ಟೆಲಿಕಮ್ಯುನಿಕೇಷನ್ ಸೇರಿದಂತೆ ಭಾರತದ 16 ಕಂಪನಿಗಳ ಸಮೂಹ SEA-ME-WE 4 ಯೋಜನೆಯನ್ನು ನೋಡಿಕೊಳ್ಳುತ್ತಿವೆ. ಭಾರತದಲ್ಲಿನ ನೆಟ್ ಸಂಚಾರ ವ್ಯವಸ್ಥೆ ಸರಿಹೋಗಬೇಕಾದರೆ ಇನ್ನೂ ನಾಲ್ಕೈದು ದಿನ ಕಾಯಬೇಕು. ಅಲ್ಲಿಯವರೆಗೆ ತಾಳ್ಮೆಯಿಂದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X