ದಂಡಾವತಿಗೆ ಮಾಜಿ ಪಿಎಂ, ಸಿಎಂ ಕೊಕ್ಕೆ
ಬೆಂಗಳೂರು,
ಏ. 25 : ಸೊರಬ ತಾಲ್ಲೂಕಿನ ಹಲವು ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ದಂಡಾವತಿ ಯೋಜನೆ ಅನುಷ್ಟಾನಕ್ಕೆ ತಾತ್ಕಾಲಿಕವಾಗಿ ಹಿನ್ನೆಡೆ ಆಗಿದೆ. ಈ ಹಿನ್ನೆಡೆಗೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರೇ ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ. id="toptextpromo">ಈ
ಯೋಜನೆ ಬಗ್ಗೆ ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಯೋಜನೆಯೊಂದು ನೆರೆಯ ಆಂಧ್ರಪ್ರದೇಶದ ಮೂಲಕ ಅಡ್ಡಗಾಲು ಹಾಕಿಸಿದ್ದು ಇತಿಹಾಸದಲ್ಲಿ ಇದೇ ಮೊದಲಿರಬಹುದು ಎಂದರು. ಮಾಜಿ ಪಿಎಂ, ಸಿಎಂ ಯೋಜನೆಗೆ ಮೇಲೆ ಪ್ರಭಾವ ಬೀರಿ ಅಡ್ಡಪಡಿಸುತ್ತಿರುವುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಈ ವಿವಾದ ನ್ಯಾಯಮಂಡಳಿ ಮುಂದಿರುವ ಕಾರಣ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ ಎಂದು ಯಡಿಯೂರಪ್ಪ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ದಂಡಾವತಿ
ಯೋಜನೆಗೆ ನಾನು ಮತ್ತು ಬಂಗಾರಪ್ಪ ಅಡ್ಡಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೇವೇಗೌಡ, ಸಿಎಂ ರಾಜಕೀಯ ಎಳಸುತನ ಪ್ರದರ್ಶಿಸಿದ್ದಾರೆ ಎಂದು ಗುಡುಗಿದ್ದಾರೆ.











Click it and Unblock the Notifications