ರೆಡ್ಡಿ ಪತ್ನಿ ಬ್ಯಾಂಕ್ ಖಾತೆಗೆ ಕನ್ನ!!
ಬಳ್ಳಾರಿ,
ಎ 22 : ಗಣಿ ಉದ್ಯಮಿ ಮತ್ತು ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಅವರ ಪತ್ನಿಯ ಉಳಿತಾಯ ಖಾತೆಯನ್ನು ಬಳ್ಳಾರಿ ಆಕ್ಸಿಸ್ ಬ್ಯಾಂಕ್ ಶಾಖೆಯಿಂದ ಮುಂಬೈ ಶಾಖೆಗೆ ವರ್ಗಾಯಿಸಲು ಯತ್ನಿಸಿದ್ದ ಮುಂಬೈ ಮೂಲದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. id="toptextpromo">ಸದ್ಯ
ಮೇ 3ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಯುವಕ ಮುಂಬೈ ಎಂಎಚ್ ಬಿ ಕಾಲೋನಿಯ ನಿವಾಸಿ ಪ್ರೇಮಾನಂದ್ ಗಿರಿಕಾರ್. ಈ ವ್ಯಕ್ತಿ ಜನಾರ್ಧನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣ ರೆಡ್ಡಿ ಅವರ ಆಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆಯನ್ನು ಮುಂಬೈಗೆ ವರ್ಗಾಯಿಸಲು ನಕಲಿ ಸಹಿ, ವಿಳಾಸ ಮತ್ತು ಇತರ ದಾಖಲೆಗಳನ್ನು ಬ್ಯಾಂಕ್ ಗೆ ಸಲ್ಲಿಸಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಗಣಿಧಣಿಗಳಿಗೆ
ಸಂಬಂಧಪಟ್ಟ ಮತ್ತು ಕೋಟ್ಯಾಂತರ ರೂಪಾಯಿ ವ್ಯವಹಾರದ ಖಾತೆ ಇದಾಗಿರುವುದರಿಂದ ಬ್ಯಾಂಕ್ ಸಿಬ್ಬಂದಿ ಕೂಡಲೇ ಗಣಿ ಕಂಪೆನಿಯ ಹಣಕಾಸು ನಿರ್ವಾಹಕರಿಗೆ ಮಾಹಿತಿ ನೀಡಿದರು. ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.











Click it and Unblock the Notifications