ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನು ಶಿಕ್ಷಣ ಸುಧಾರಣೆಗೆ ಕ್ರಮ : ಮೊಯ್ಲಿ

By Mrutyunjaya Kalmat
|
Google Oneindia Kannada News

M Veerappa Moily
ನವದೆಹಲಿ, ಏ. 22 : ಜಾಗತಿಕ ಗುಣಮಟ್ಟದ ಅನುಗುಣವಾಗಿ ಭಾರತೀಯ ಕಾನೂನು ಶಿಕ್ಷಣವನ್ನು ರೂಪಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ ಎಂದು ಕೇಂದ್ರದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಶಿಕ್ಷಣದಲ್ಲಿ ಸುಧಾರಣೆ ತರಲು ರಾಷ್ಟ್ರ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದರು. ವಕೀಲರ ಸಂಘ, ವ್ಯಾಪಾರ ಹಾಗೂ ಕೈಗಾರಿಕಾ ಕ್ಷೇತ್ರದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾನೂನು ಶಿಕ್ಷಣಕ್ಕೆ ಸಾಂಘಿಕ ಸುಧಾರಣೆ ತರುವ ಸಲುವಾಗಿ ನೀಲ ನಕ್ಷೆಯನ್ನು ಸಿದ್ದಪಡಿಸುವಲ್ಲಿ ಸರಕಾರ ಸಹ ಪ್ರಯತ್ನಿಸಲಿದೆ ಎಂದು ಅವರು ವಿವರಿಸಿದರು.

1961 ರ ವಕೀಲರ ಕಾಯ್ದೆ ಅನ್ವಯ ದೇಶದ ಕಾನೂನು ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಸಲುವಾಗಿ ಭಾರತೀಯ ವಕೀಲರ ಮಂಡಳಿ ಕೆಲವೊಂದು ನಿಯಮಗಳನ್ನು ಅಳವಡಿಸಿಕೊಂಡಿದೆ. ಈ ನಿಯಮಗಳ ಪ್ರಸಕ್ತ ವಕೀಲ ವೃತ್ತಿಪರರ ಬೇಡಿಕೆಗೆ ಪೂರಕವಾಗಿಲ್ಲ. ವಕೀಲರ ಮಂಡಳಿಯನ್ನು ದೇಶದ ಕಾನೂನು ಶಿಕ್ಷಣದ ನಿಯಂತ್ರಕನೆಂದು ಪ್ರಸ್ತುತ ಪರಿಗಣಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X