ಹಿಮಾಚಲ ಪ್ರದೇಶದಲ್ಲಿ ನಿತ್ಯಾನಂದ ಬಂಧನ
ಸೋಲನ್(ಹಿಮಾಚಲ
ಪ್ರದೇಶ), ಏ. 21 : ಕಳಂಕಿತ ಸ್ವಾಮಿ ಎಂದೇ ಕುಖ್ಯಾತಿಗೊಂಡು ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಸ್ವಾಮಿ ನಿತ್ಯಾನಂದ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರು ಮತ್ತು ಹಿಮಾಚಲ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಅರ್ಕಿ ಎಂಬಲ್ಲಿ ಬುಧವಾರ ಮಧ್ಯಾಹ್ನ ಬಂಧಿಸಲಾಗಿದೆ. id="toptextpromo">ಸನ್ಯಾಸಿಯಾಗಿದ್ದುಕೊಂಡು
ತಮಿಳು ಚಿತ್ರನಟಿ ರಂಜಿತಾ ಜೊತೆಗೆ ರಾಸಲೀಲೆ ನಡೆಸಿದ ಪ್ರಕರಣವನ್ನು ಚೆನ್ನೈ ಮೂಲದ ಸನ್ ನೆಟ್ ವರ್ಕ್ಸ್ ಬಹಿರಂಗಗೊಳಿಸಿತ್ತು. ನಿತ್ಯಾನಂದಸ್ವಾಮಿ ಈ ಸೆಕ್ಸ್ ವಿಡಿಯೋಗಳು ಸೇರಿದಂತೆ ಆತನ ಅಷ್ಟೂ ಕರ್ಮಕಾಂಡಗಳು ದೇಶದ ಎಲ್ಲ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಾನಕ್ಕೆ ಅಂಜಿದ ಸ್ವಾಮಿ ನಾಪತ್ತೆಯಾಗಿದ್ದರು. ಆಶ್ರಮದ ವೆಬ್ ಸೈಟ್ ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಅವರು, ತಮ್ಮ ಅಭಿಪ್ರಾಯಗಳನ್ನು ಹೊರಗೆಡುವುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಸ್ವಾಮಿ
ನಿತ್ಯಾನಂದನ ಮೇಲೆ ಅತ್ಯಾಚಾರ ಮತ್ತು ಸಲಿಂಗ ಕಾಮದ ಪ್ರಕರಣಗಳು ದಾಖಲಾಗಿದ್ದವು. ಚೆನ್ನೈ ಪೊಲೀಸರು ಪ್ರಕರಣವನ್ನು ಬೆಂಗಳೂರು ಪೊಲೀಸರ ಕೈಗೆ ಒಪ್ಪಿಸಿದ್ದರು. ನಿತ್ಯಾನಂದನ ಬಂಧನಕ್ಕೆ ನೂತನ ತಂಡ ರಚಿಸಿದ್ದ ಬೆಂಗಳೂರು ಪೊಲೀಸರು, ಆತನ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದರು. ನಿತ್ಯಾನಂದನ ಕಾರು ಚಾಲಕ ಲೆನಿನ್ ಕುರುಪ್ಪನ್ ಎಂಬಾತನೇ ನಿತ್ಯಾನಂದನ ಕಾಮಕಾಂಡವನ್ನು ಬಯಲಿಗೆಳೆದ ರೂವಾರಿಯಾಗಿದ್ದಾನೆ.











Click it and Unblock the Notifications