ಬಾಗಿಲು ಮುಚ್ಚಿದ ರೇಷ್ಮೆ ಮಂಡಳಿ
ಬೆಂಗಳೂರು,
ಏ. 20 : ಕಳೆದ ಹಲವು ವರ್ಷಗಳಿಂದ ನಿರಂತರ ನಷ್ಟ ಅನುಭವಿಸುತ್ತ ಬಂದಿರುವ ರೇಷ್ಮೆ ಮಂಡಳಿಯನ್ನು ಬಂದ್ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ರೇಷ್ಮೆ ಖಾತೆ ಸಚಿವ ವೆಂಕಟರಮಣಪ್ಪ ತಿಳಿಸಿದ್ದಾರೆ. id="toptextpromo"> ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು ನಡೆಯಲಿರುವ ಸಚಿವ ಸಂಪುಟದಲ್ಲಿ ವಿಸ್ತೃತವಾಗಿ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು. ಈ ನಷ್ಟಕ್ಕೆ ರೇಷ್ಮೆ ಮುಕ್ತ ವ್ಯಾಪಾರ ನೀತಿಯೇ ಕಾರಣವಾಗಿದೆ. ಜೊತೆಗೆ ಆಮದು ಹಾಗೂ ಕೃತಕ ರೇಷ್ಮೆ ನೂಲಿನ ಕಡೆ ಒಲವು ವ್ಯಕ್ತವಾಗಿರುವುದೂ ಇತರ ಕಾರಣಗಳು ಎಂದು ಅವರು ವಿವರಿಸಿದರು. id='are-slot-1' class='oiad oi-axt oiadv'> id='top-searched-articles'> ಸಂಸ್ಥೆಗೆ ಪ್ರತಿ ವರ್ಷ ಬರುವ ಆದಾಯ ಇಬ್ಬರು ಐಎಎಸ್ ಅಧಿಕಾರಿಗಳ ವೇತನಕ್ಕೆ ಹೋಗುತ್ತದೆ. ಸಂಸ್ಥೆಯ 101 ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆಯಬೇಕಾಗುತ್ತದೆ. ಸರಕಾರ ಸಮ್ಮತಿ ಸೂಚಿಸಿದರೆ ಈ ಸಿಬ್ಬಂದಿಯನ್ನು ಬೇರೆ ಇಲಾಖೆಗೆ ನಿಯುಕ್ತಿಗೊಳಿಸಬಹುದು ಎಂದು ವೆಂಕಟರಮಣಪ್ಪ ವಿವರಿಸಿದರು.











Click it and Unblock the Notifications