ನಿತ್ಯಾನಂದನ ಹಣೆಬರಹ ಏನಾಗಲಿದೆ?
ಬೆಂಗಳೂರು,
ಏ.20: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನರಾಸಲೀಲೆ ಪ್ರಕರಣದ ಜಾಮೀನು ಅರ್ಜಿವಿಚಾರಣೆ ಸಾಗಿದ್ದು, ಇಂದು (ಏ.20) ಆದೇಶ ಹೊರಬೀಳುವ ಸಾಧ್ಯತೆಯಿದೆ. ಸೆಷನ್ಸ್ ಕೋರ್ಟ್ ನಿಂದ ಜಾಮೀನು ಪಡೆದಿದ್ದ ನಿತ್ಯಾನಂದನ ಹಣೆಬರಹವನ್ನು ಇಂದು ನ್ಯಾಯಾಧೀಶರು ನಿರ್ಧರಿಸಲಿದ್ದಾರೆ. id="toptextpromo">ಇದಲ್ಲದೆ,
ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾಗೊಳಿಸುವಂತೆ ಕೋರಿ ಹೈಕೋರ್ಟ್ ನಲ್ಲಿ ನಿತ್ಯಾನಂದ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಕೂಡ ಇಂದು ನಡೆಯಲಿದೆ. ನಟಿ ರಂಜಿತಾ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ವಿಡಿಯೋ ಪ್ರಸಾರ ಆರಂಭವಾದ ಗಳಿಗೆಯಿಂದ ನಿತ್ಯಾನಂದ ನಾಪತ್ತೆಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಬಿಡದಿ ಆಶ್ರಮದಲ್ಲಿ ಅನೈತಿಕ ಚಟುವಟಿಕೆಗಳು ನಡೆದಿಲ್ಲ ಎಂದು ವಿಡಿಯೋ ಸಂದರ್ಶನ ಮೂಲಕ ಸಮರ್ಥನೆ ನೀಡಿರುವ ನಿತ್ಯಾನಂದ, ನಂತರ ಆಶ್ರಮದಲ್ಲಿನ ಎಲ್ಲಾ ಹುದ್ದೆಗಳನ್ನು ತೊರೆದಿದ್ದೇನೆ ಎಂದು ಘೋಷಿಸಿದ್ದರು. ಬಿಡದಿ ಆಶ್ರಮದಲ್ಲಿ ಅಕ್ರಮವಾಗಿ ಶ್ರೀಗಂಧವನ್ನು ದಾಸ್ತಾನು ಮಾಡಲಾಗಿದೆ ಎಂದು ರಾಜ್ಯ ಅರಣ್ಯ ಇಲಾಖೆ ಕೂಡ ನಿತ್ಯಾನಂದನ ಮೇಲೆ ಮೊಕದ್ದಮೆ ಹೂಡಿದೆ.











Click it and Unblock the Notifications