ಟಾರ್ಗೆಟ್ ಚಿನ್ನಸ್ವಾಮಿ ಕ್ರೀಡಾಂಗಣ ಗೇಟ್ ನಂ1

ಎಂಜಿ ರಸ್ತೆಯ ಗಾಂಧೀ ಪ್ರತಿಮೆ ಬಳಿಯ ಬಸ್ ಸ್ಟಾಪ್ ಬಳಿ ಹಳದಿ ಸಿಮೆಂಟ್ ಚೀಲದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಸ್ಫೋಟಕ ವಸ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ1 ಬಳಿ ಸಿಕ್ಕಿರುವ ಈ ಸ್ಫೋಟಕ ವಸ್ತು ವಿವರಗಳನ್ನು ತಿಳಿಯಲು ಸ್ಥಳಕ್ಕೆ ಶ್ವಾನದಳ, ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಕಚ್ಚಾ ಬಾಂಬ್ ಇರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರೂ, ಮಾಧ್ಯಮ ಪ್ರತಿನಿಧಿಗಳನ್ನು ಶಂಕಿತ ಸ್ಥಳದಿಂದ ದೂರ ಇರುವಂತೆ ಆದೇಶಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಬಾಂಬ್ ಪತ್ತೆ ಆಗಿದ್ದು ಹೇಗೆ? : ಕಬ್ಬನ್ ಪಾರ್ಕ್ ಠಾಣೆಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ.1 ನಿಂದ 50 ಮೀಟರ್ ದೂರದಲ್ಲಿ ನಾಲ್ಕನೇ ಬಾಂಬ್ ಇರಿಸಲಾಗಿದೆ ಎಂದು ಹೇಳಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಬಾಂಬ್ ನಿಷ್ಕ್ರಿಯ ದಳದವರು ಬಾಂಬ್ ಅನ್ನು ನಿಷ್ಖ್ರಿಯಗೊಳಿಸಿದ್ದಾರೆ. ಇದೊಂದು ಕಚ್ಚಾಬಾಂಬ್ ಎಂದು ತಿಳಿದುಬಂದಿದೆ. ಇದರಲ್ಲಿ ಯಾವುದೇ ಟೈಮರ್ ಅಳವಡಿಸಿರಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದರು.












Click it and Unblock the Notifications