ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ.ನಾಡು ವಿಧಾನಸಭೆಯಲ್ಲಿ ಮೊಳಗಿತು ಕನ್ನಡ ದನಿ

By Mahesh
|
Google Oneindia Kannada News

K Gopinath
ಚೆನ್ನೈ, ಏ.18: ಹೊಸೂರು ಕ್ಷೇತ್ರ ದಿಂದ 2ನೇ ಬಾರಿಗೆ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕ ಕೆ.ಗೋಪಿನಾಥ್ ಅವರು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಚಾರವನ್ನು ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ಕನ್ನಡದಲ್ಲಿ ಮಾತನಾಡಿ ಎಲ್ಲರಲ್ಲೂ ಬೆರಗು ಮೂಡಿಸಿದರು.

ಗಡಿನಾಡಿನಲ್ಲಿ ಕನ್ನಡಿಗ ಶಿಕ್ಷಕರ ನೇಮಕ ಸೇರಿದಂತೆ ಇತರ ವಿಚಾರಗಳ ಬಗ್ಗೆ ಕನ್ನಡದಲ್ಲಿ ಮಾತನಾಡಿದ ಅವರು, ಭಾಷಾ ಅಲ್ಪಸಂಖ್ಯಾತರಿಗೆ ಕನ್ನಡ ಅಥವಾ ತೆಲುಗು ಭಾಷೆಗಳನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿನ ಜನರಿಗೆ ತಮ್ಮ ಭಾಷೆ ಗಳನ್ನು ನಾಲ್ಕನೇ ಭಾಷೆಯಾಗಿ ಆರಿಸಿಕೊಳ್ಳುವ ಅವಕಾಶ ಮಾತ್ರವಿದೆ ಎಂದು ಹೇಳುವ ಮೂಲಕ ಅಲ್ಲಿನ ಶಿಕ್ಷಣ ಸಚಿವರ ಗಮನ ಸೆಳೆದರು.

ಎಐಎಡಿಎಂಕೆ ವಿರೋಧ: ಗೋಪಿನಾಥ್ ಅವರು ಹೊಸ ವಿಧಾನಸಭೆ ಸಂಕೀರ್ಣ ರೂಪಿಸಿದ ಕರುಣಾನಿಧಿ ಯವರನ್ನು ಶ್ಲಾಘಿಸುವ ಮೂಲಕ ಮಾತು ಆರಂಭಿಸಿದರು. ಇಂಥ 'ಮಯ ಸಭಾ'ದ ರೂವಾರಿಗೆ ಹೊಸೂರು ಕ್ಷೇತ್ರದ ಕನ್ನಡ ಮತ್ತು ತಮಿಳು ಭಾಷಿಕರ ಅಭಿನಂದನೆಗಳು ಎಂದು ಕನ್ನಡ ಮತ್ತು ತೆಲುಗಿನಲ್ಲಿ ಹೇಳಿದರು. ಇಂಗ್ಲಿಷ್ ಜತೆಗೆ ಹಿಂದಿಯನ್ನೂ ಅವರು ಈ ಸಂದರ್ಭದಲ್ಲಿ ಬಳಸಿದರು. ಗೋಪಿನಾಥ್ ಮಾತಿಗೆ ಎಐಎಡಿಎಂಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ತಮಗೆ ಅರ್ಥವಾಗದ ಭಾಷೆ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಸ್ಪೀಕರ್‌ಗೆ ಮನವಿ ಮಾಡಿದರು.

ಶಾಸಕರು ಯಾವುದೇ ಭಾರತೀಯ ಭಾಷೆಯಲ್ಲಿ ಮಾತನಾಡಲು ಅವಕಾಶವಿದೆ ಎಂದು ಸ್ಪೀಕರ್ ಹೇಳಿದಾಗ ಎಐಎಡಿಎಂಕೆ ಸದಸ್ಯರು ಸುಮ್ಮನಾಗಬೇಕಾಯಿತು. ಗೋಪಿನಾಥ್ ಅವರು ಕನ್ನಡಿಗರಿಗೆ ಬೆಂಬಲ ನೀಡುತ್ತಾ ಬಂದಿದ್ದು, ಕನ್ನಡ ರಾಜ್ಯೋತ್ಸವ ಸೇರಿದಂತೆ ಕನ್ನಡದ ಹಲವು ಕಾರ್ಯಕ್ರಮಗಳಿಗೂ ಹಾಜರಾಗುತ್ತಿದ್ದಾರೆ. ಇದೀಗ ಕನ್ನಡವನ್ನು ತಮಿಳುನಾಡು ವಿಧಾನ ಸಭೆಗೂ ಕೊಂಡೊಯ್ಯುವ ಮೂಲಕ ಗಡಿನಾಡಿನ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X