ಯಡಿಯೂರಪ್ಪ ಭಸ್ಮಾಸುರ : ಉಗ್ರಪ್ಪ
ತುಮಕೂರು,
ಏ. 17 : ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾ ಸರಕಾರದ ಆಡಳಿತವನ್ನು ದುರುಪಯೋಗ ಮಾಡಿಕೊಂಡು ವಾಮ ಮಾರ್ಗದ ಮೂಲಕ ಅಧಿಕಾರವನ್ನು ಪಡೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿಂದ ಮೇಲೆ ಆಧುನಿಕ ಭಸ್ಮಾಸುರನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು. id="toptextpromo"> ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡುತ್ತಿದ್ದ ಅವರು, ಆಡಳಿತ ಪಕ್ಷವು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಡ್ಡ ದಾರಿಯ ಮೂಲಕ ಯಶಸ್ಸನ್ನು ಪಡೆದುಕೊಳ್ಳಲು ಹೊರಟಿದೆ. ಆದರೆ ಇದು ಮುಂದೊಂದು ದಿನ ಅವರಿಗೇ ಮುಳುವಾಗಿ ಪರಿಣಮಿಸಲಿದೆ ಎಂದು ಭವಿಷ್ಯ ನುಡಿದರು. id='are-slot-1' class='oiad oi-axt oiadv'> id='top-searched-articles'> ಹಣ ಮತ್ತು ತೋಳ್ಬಲದಿಂದ ಬಿಜೆಪಿಯು ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಕಳೆದ 23 ತಿಂಗಳುಗಳಲ್ಲಿ ನಡೆದ ಇತರ ಚುನಾವಣೆಗಳನ್ನು ಗೆದ್ದುಕೊಂಡಿದೆ. ಅದೇ ರೀತಿ ಗ್ರಾಮ ಪಂಚಾಯತಿ ಚುನಾವಣೆಗಳಲ್ಲೂ ಗೆಲ್ಲುವ ಕನಸು ನಮ್ಮ ಮುಖ್ಯಮಂತ್ರಿಯವರದ್ದು. ಆದರೆ ಇಲ್ಲಿ ಅವರಿಗೆ ಭ್ರಮನಿರಸನ ಎದುರಾಗುತ್ತದೆ ಎಂದು ಉಗ್ರಪ್ಪ ಆತ್ಮವಿಶ್ವಾಸದಿಂದ ಹೇಳಿದರು.











Click it and Unblock the Notifications