ಮೇ 10ಕ್ಕೆ ಪಿಯುಸಿ ಫಲಿತಾಂಶ, ಕಾಗೇರಿ
ಬೆಂಗಳೂರು,
ಏ. 17 : ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೇ 10ರೊಳಗೆ ಪಿಯುಸಿ ಮತ್ತು ಮೇ 20ರೊಳಗೆ ಎಸ್ಎಸ್ಎಸ್ ಸಿ ಫಲಿತಾಂಶ ಪ್ರಕಟಿಸುವ ಉದ್ದೇಶವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. id="toptextpromo"> ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಶುಕ್ರವಾರ ಮಾತನಾಡುತ್ತಿದ್ದರು. ಪಾಲಕರು ಡೊನೇಷನ್ ಪಡೆಯುವ ಖಾಸಗಿ ವಿದ್ಯಾಸಂಸ್ಥೆಗಳ ವಿರುದ್ಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿಗೆ ದೂರು ನೀಡಬೇಕು. ಇಂಥ ದೂರುಗಳನ್ನು ಪರಿಶೀಲಿಸಲು ರಾಜ್ಯ ಮಟ್ಟದಲ್ಲಿ ವಿಶೇಷ ತಂಡ ರಚಿಸಲು ತೀರ್ಮಾನಿಸಲಾಗಿದೆ. ಈ ತಂಡ ಸಂಬಂಧಿತ ವಿದ್ಯಾಸಂಸ್ಥೆಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಲಿದೆ. ದೂರು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. id='are-slot-1' class='oiad oi-axt oiadv'> id='top-searched-articles'> ಮೌಲ್ಯಮಾಪನ ಬಹಿಷ್ಕರಿಸಿರುವವರ ಹಿಂದೆ ರಾಜಕೀಯ ಕೈವಾಡವಿದೆ ಎಂಬ ಆರೋಪ ಸರಿಯಿಲ್ಲ. ಮುಂದಿನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬ ಆರೋಪ ನಿರಾಧಾರ. ಹಾಗೊಂದು ವೇಳೆ ರಾಜಕೀಯ ಬೆರೆಸಿದ್ದರೆ ನಾವೂ ರಾಜಕೀಯವಾಗಿಯೇ ಉತ್ತರಿಸುತ್ತೇವೆ ಎಂದು ಕಾಗೇರಿ ತಿರುಗೇಟು ನೀಡಿದರು.











Click it and Unblock the Notifications