ದೇಶಪಾಂಡೆ ಓಕೆ, ಡಿಕೆಶಿ ಯಾಕೆ?: ಮೋಟಮ್ಮ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಅಧ್ಯಕ್ಷರಾಗಿ ಆರ್ ವಿ ದೇಶಪಾಂಡೆ ಸಮರ್ಥವಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಒಂದೇ ನಾಯಕತ್ವದಲ್ಲಿ ನಡೆಯುವುದು ಸೂಕ್ತ. ಒಂದು ಪಕ್ಷ ಎಂಬ ವಿಚಾರಕ್ಕೆ ಬಂದಾಗ ಅಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ನನ್ನ ಪ್ರಕಾರ ಕೆಪಿಸಿಸಿಗೆ ಒಬ್ಬರೇ ಅಧ್ಯಕ್ಷರು ಸಾಕು.
ಈ ಬಗ್ಗೆ ಹೈಕಮಾಂಡ್ ವಿಚಾರ ಮಾಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆಯಿಲ್ಲ. ರಾಜ್ಯದ ಕಾಂಗ್ರೆಸ್ ಘಟಕದಲ್ಲಿ ಎರಡು ಹಂತದ ಅಧಿಕಾರ ವ್ಯವಸ್ಥೆಯನ್ನು ಹೈಕಮಾಂಡ್ ಪ್ರಾಯೋಗಿಕವಾಗಿ ಅಳವಡಿಸಿದೆ. ಆದರೆ ಎರಡೆರಡು ಶಕ್ತಿ ಕೇಂದ್ರಗಳಿರುವುದು ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದೆ ಎಂದು ಮೂಡಿಗೆರೆಯ ಮೋಟಮ್ಮ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಾಗಿ ನೇಮಕಗೊಂಡ ಮೇಲೆ ತೆರವುಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಮುಖಂಡ ದೇಶಪಾಂಡೆಯವರನ್ನು ನೇಮಕ ಮಾಡಲಾಗಿತ್ತು. ಆದರೆ ಡಿಕೆಶಿ ಬೆಂಬಲಿಗರನ್ನು ಸಮಾಧಾನ ಪಡಿಸಲು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿ ಮಾಡಲಾಯಿತು ಹಾಗೂ ಭಿನ್ನಮತದ ಭಯದಿಂದ ಕೆಪಿಸಿಸಿ ಪಟ್ಟಕ್ಕೇರದಂತೆ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ತಡೆಯಿತು. ಕೊನೆಗೆ ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಬೇಕಾಯಿತು.












Click it and Unblock the Notifications