ಶಾರದಾ ಜಾಗಕ್ಕೆ ಉತ್ತರದ ಐಎಎಸ್ ಅಧಿಕಾರಿ?

ವಿಶ್ವಾಸದ ಕೊರತೆ ಹಿನ್ನೆಲೆಯಲ್ಲಿ ಶಾರದಾ ಸುಬ್ರಹ್ಮಣ್ಯಂ ಸೇರಿದಂತೆ ಐವರು ಅಧಿಕಾರಿಗಳನ್ನು ರಜೆ ಮೇಲೆ ತೆರಳುವಂತೆ ಸೂಚಿಸಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆ ಜಾಗಕ್ಕೆ ಬೇರೆ ಅಧಿಕಾರಿಯ ನೇಮಕಕ್ಕೆ ಆದೇಶಿಸಿದ್ದರು.
ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಹಾಗೂ ಮುಖ್ಯಮಂತ್ರಿಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಜತೆ ರಾಜ್ಯಪಾಲರು ಚರ್ಚೆ ನಡೆಸಿದ್ದಾರೆ. ಈ ಹುದ್ದೆಗೆ ಅರ್ಹರಾದ ಐಎಎಸ್ ಅಧಿಕಾರಿಗಳ ಪಟ್ಟಿಯನ್ನು ಶೀಘ್ರ ನೀಡುವಂತೆ ಸೂಚಿಸಲಾಗಿದ್ದರೂ, ಉತ್ತರ ಭಾರತ ಮೂಲದ ಕಾಂಗ್ರೆಸ್ ನಿಷ್ಠ ಐಎಎಸ್ ಅಧಿಕಾರಿಯ ನೇಮಕಕ್ಕೆ ತೆರೆಮರೆಯಲ್ಲಿ ಯತ್ನ ನಡೆದಿದೆ ಎನ್ನಲಾಗಿದೆ.












Click it and Unblock the Notifications