ಭಾರತದ ಮುಡಿಗೆ ವಿಶ್ವಕಪ್ ಕಬಡ್ಡಿ ಕಿರೀಟ
ಲೂದಿಯಾನಾ,
ಏ. 13 : ವಿಶ್ವಕಪ್ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತೀಯ ಕಬಡ್ಡಿ ತಂಡ ಚಾಂಪಿಯನ್ ಶಿಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಕಬಡ್ಡಿ ವಿಶ್ವಕಪ್ ಗೆಲುವಿನಿಂದಾಗಿ ಭಾರತ ತಂಡ 1ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಪಡೆಯಿತು. ಎರಡನೇ ಸ್ಥಾನವನ್ನು ಪಡೆದ ಪಾಕಿಸ್ತಾನ 50 ಲಕ್ಷ ರೂಪಾಯಿಗಳ ಬಹುಮಾನದ ಮೊತ್ತವನ್ನು ತನ್ನದಾಗಿಸಿಕೊಂಡಿತು. id="toptextpromo"> ಭಯೋತ್ಪಾದಕ ದಾಳಿಯ ನಡುವೆ ಬಿಗಿ ಬಂದೋಬಸ್ತ್ ಮಧ್ಯೆ ಇಲ್ಲಿನ ಗುರುನಾನಕ್ ಮೈದಾನದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ, ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಪಾಕ್ ವಿರುದ್ಧ ಭಾರತ ತಂಡ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಯಿತು. ಭಾರತ ಎದುರಾಳಿ ಪಾಕಿಸ್ತಾನ ತಂಡವನ್ನು 58-24 ಅಂಕಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. id='are-slot-1' class='oiad oi-axt oiadv'> id='top-searched-articles'> ಭಾರತ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ, ಇರಾನ್, ಇಟಲಿ, ಕೆನಡಾ, ಬ್ರಿಟನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ತಂಡಗಳು ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಭಾರತ ಸೆಮಿಫೈನಲ್ ಪಂದ್ಯದಲ್ಲಿ ಕೆನಡಾ ತಂಡವನ್ನು 57-36 ಅಂಕಗಳಿಂದ ಸೋಲಿಸಿ ಫೈನಲ್ ಹಂತವನ್ನು ತಲುಪಿತ್ತು. ಪಾಕಿಸ್ತಾನ ತಂಡ ಎದುರಾಳಿ ಇಟಲಿ ತಂಡವನ್ನು ಸೆಮಿಫೈನಲ್‌ನಲ್ಲಿ 57-33 ಅಂಕಗಳಿಂದ ಸೋಲಿಸಿ ಫೈನಲ್‌ಗೆ ತಲುಪಿತ್ತು.











Click it and Unblock the Notifications