ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರನ್ನು ಅಗ್ಗವಾಗಿ ಕಾಣಬೇಡಿ!

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

International Women's Day celebration by BJP
ಶಿವಮೊಗ್ಗ, ಏ.13: ಭಾರತ ದೇಶದಲ್ಲಿ ಮಹಿಳೆಗೆ ಕೊಟ್ಟಿರುವಷ್ಟು ಸ್ವಾತಂತ್ರ್ಯವನ್ನು ಬೇರೆ ಯಾವ ದೇಶವೂ ನೀಡಿಲ್ಲ. ಅದರಲ್ಲೂ ಹಿಂದೂ ಸಂಸ್ಕೃತಿ ಯಲ್ಲಿ ಮಹಿಳೆಗೆ ಪೂಜನೀಯ ಸ್ಥಾನ ನೀಡಿದ್ದು, ಹಿಂದೂ ಸಂಸ್ಕೃತಿ ಅತ್ಯಂತ ದೊಡ್ಡದಾಗಿದೆ ಎಂದು ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಭಾನುಪ್ರಕಾಶ್ ತಿಳಿಸಿದರು.

ಬಿಜೆಪಿಯ ಮಹಿಳಾ ಮೋರ್ಚಾವತಿಯಿಂದ ಅಂಬೇ ಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚ ಹುಟ್ಟಿದಾಗಿನಿಂದಲೂ ಮಹಿಳೆ ಇದ್ದಾಳೆ. ಪುರಾಣ ಕಾಲದಲ್ಲೂ ಹೆಣ್ಣಿಗೆ ತನ್ನದೇ ಆದ ಸ್ಥಾನ ದೊರಕಿದೆ. ಇತಿಹಾಸ ಕಾಲದಲ್ಲಿ ಮಹಿಳೆಯು ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾಳೆ. ಆದರೆ, ಇಂದಿನ ವರ್ತಮಾನ ಕಾಲದಲ್ಲಿ ಹೆಣ್ಣಿನ ಸ್ಥಾನಮಾನದಲ್ಲಿ ಪರಿಸ್ಥಿತಿ ಬೇರೆಯಾಗಿದೆ ಎಂದು ಭಾವಿಸಲಾಗಿದ್ದು, ಪರಿಸ್ಥಿತಿಯಲ್ಲಿ ವ್ಯತ್ಯಾಸ ವಾಗಿಲ್ಲ. ಕೇವಲ ಮನಸ್ಥಿತಿಯಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ, ಮಹಿಳೆ ಯರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಹಿಂದಿನಿಂದಲೂ ಮಹಿಳೆಯರ ಮೇಲೆ ಅಪಚಾರ ಮಾಡಲು ಮುಂದಾದಾಗಲೆಲ್ಲಾ ಪ್ರತಿಭಟನೆ ನಡೆದಿದೆ. ಆದರೂ ಸಹ ಮಹಿಳೆಯ ರನ್ನು ಅಗ್ಗವಾಗಿ ಕಾಣುತ್ತಿದ್ದು, ಇದು ನಿಲ್ಲಬೇಕು. ಮಹಿಳೆಯು ಸಮಾಜ ಮುಖಿಯಾಗಿದ್ದಲ್ಲಿ ದೇಶವು ಉತ್ತಮವಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಜಾಗೃತವಾಗುವ ಅವಶ್ಯಕತೆ ಇರುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿಯ ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ರೇಣುಕಾ ನಾಗರಾಜ್ ವಹಿಸಿದ್ದರೆ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ಡಾ|.ಮಂಗಳಾಶ್ರೀಧರ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ರಾಜಶ್ರೀ ಜಡೆ, ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ರಾಜ್ಯ ವಕ್ತಾರ ಆಯನೂರು ಮಂಜುನಾಥ್, ನಗರಸಭಾ ಸದಸ್ಯ ಎನ್.ಜೆ.ರಾಜಶೇಖರ್, ಸುಧಾಮಣಿ ಬೋರಯ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X