ಗೋಮಾಳ ಜಮೀನಿಗೆ ಒತ್ತಾಯಿಸಿ ಪ್ರತಿಭಟನೆ

Village residents demand for 'Gomala' land
ಶಿವಮೊಗ್ಗ,ಏ.13,: ವಿರುಪ್ಪನ ಕೊಪ್ಪಕ್ಕೆ ಸೇರಿದ ಗೋಮಾಳ ಜಮೀನನ್ನು ವಿರುಪ್ಪನಕೊಪ್ಪದ ನಿವೇಶನವಿಲ್ಲದ ಗ್ರಾಮಸ್ಥರಿಗೆ ನೀಡುವಂತೆ ಒತ್ತಾಯಿಸಿ ಇಂದು ವಿರುಪ್ಪನಕೊಪ್ಪ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ನಂತರ, ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಲಕ್ಷ್ಮಿ, ಚಿಕ್ಕಮ್ಮ, ಮುನಿಸ್ವಾಮಿ, ಲೋಕೇಶ್, ಯೋಗೇಶ್, ಮಂಜುಳಾ, ಭಾಗ್ಯ, ಕವಿತಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿರುಪ್ಪನಕೊಪ್ಪಕ್ಕೆ ಸೇರಿದ ಸರ್ವೇ ನಂ.6ರಲ್ಲಿರುವ ಜಮೀನನ್ನು ಈಗಾಗಲೇ ನಗರಸಭೆಯ ಆಶ್ರಯ ಬಡಾವಣೆಗಾಗಿ ಕಾಯ್ದಿರಿಸಿದ್ದು, ಈ ಜಮೀನು ವಿರುಪ್ಪನಕೊಪ್ಪ ಗ್ರಾಮಸ್ಥರಿಗೆ ಸೇರಬೇಕಾಗಿತ್ತು. ಆದರೆ, ಈ ಜಮೀನು ಆಶ್ರಯ ಬಡಾವಣೆಗೆ ಸೇರಿದ್ದಾಗಿದೆ ಎಂದು ತಿಳಿದಿರಲಿಲ್ಲ. ನಮ್ಮ ಗ್ರಾಮದಲ್ಲಿ 100ರಿಂದ 150 ಜನರಿಗೆ ವಸತಿ ಇಲ್ಲ, ಶಾಲೆಗೆ ಜಾಗವಿಲ್ಲ, ಆಸ್ಪತ್ರೆಯಾಗಲೀ ಇಲ್ಲ. ಹೀಗಾಗಿ, ಗ್ರಾಮದ ಅಭಿವೃದ್ಧಿಯ ನಿಟ್ಟಿನಲ್ಲಿ ಹಾಗೂ ನಿವೇಶನವಿಲ್ಲದ ಗ್ರಾಮದ ಜನರಿಗೆ ನಿವೇಶನ ದೊರಕಿಸಿಕೊಡುವ ಸಲುವಾಗಿ ಗ್ರಾಮಕ್ಕೆ ಸೇರಿದ ಗೋಮಾಳದ ಜಮೀನನ್ನು ವಿರುಪ್ಪನಕೊಪ್ಪದ ಜನರಿಗೆ ಮಾಡಿಕೊಡುವಂತೆ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+