ರಾಜ್ಯ ಮತ್ತೊಮ್ಮೆ ಚಿನ್ನದ ಬೀಡಾಗಲಿದೆ!

Jos Alukkas Jewellery showroom at Udupi
ಉಡುಪಿ, ಏ.12: ರಾಜ್ಯದಲ್ಲಿ ನಾನಾ ಕಡೆ ಸರ್ವೆ ನಡೆಸಿ ಚಿನ್ನದ 11 ಹೊಸ ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ಕೆ.ಜಿ.ಎಫ್., ಹಟ್ಟಿಯಂಗಡಿ ಮಾತ್ರವಲ್ಲ, ಇಡೀ ರಾಜ್ಯವೇ ಚಿನ್ನದ ನಾಡು ಆಗಲಿದೆ ಎಂದರು. ಜೋಸ್ ಅಲುಕ್ಕಾಸ್ ಆಂಡ್ ಸನ್ಸ್ ನಡೆಸುತ್ತಿರುವ ಆಲುಕ್ಕಾಸ್ ಸಂಸ್ಥೆಯು ರಾಜ್ಯದಲ್ಲಿ ನಾಲ್ಕನೇ ಶಾಖೆ ಆರಂಭಿಸಿದೆ.

ಸಾಮಗ್ರಿ ಪೂರೈಕೆ ಮತ್ತು ಸೇವೆಯಲ್ಲಿ ಉತ್ಕೃಷ್ಟತೆ ಇದ್ದರೆ ಉಡುಪಿ ಮತ್ತು ದಕ್ಷಿಣ ಕನ್ನಡದ ಜನ ಬೆಂಬಲಿಸುತ್ತಾರೆ. ಜೋಸ್ ಆಲುಕ್ಕಾಸ್ ಅಂಥ ಉತ್ಕೃಷ್ಟತೆ ಹೊಂದಿರುವ ಸಂಸ್ಥೆ ಎಂದು ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಹೇಳಿದರು. ಉಡುಪಿಯ ಮಾರುತಿ ವೀಥಿಕಾದಲ್ಲಿ ಜೋಸ್ ಆಲುಕಾ ಆಂಡ್ ಸನ್ಸ್ ವತಿಯಿಂದ ಭಾನುವಾರ ಆಲುಕ್ಕಾಸ್ ಜುವೆಲ್ಲರಿ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿಯ ಮಳಿಗೆಯಲ್ಲಿ ಪ್ರತ್ಯೇಕ ವಜ್ರ(ಡೈಮಂಡ್)ಗ್ಯಾಲರಿಯಿದ್ದು ಜಗತ್ತಿನ ಎಲ್ಲ ಮಾದರಿಯ ವಜ್ರ ಮತ್ತು ಪ್ಲಾಟಿನಂ ಲಭ್ಯ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಕ್ಕಂತೆ ನಾನಾ ವಿನ್ಯಾಸಗಳ ಆಭರಣಗಳಿವೆ. ಕನ್ನಡ ಚಲನಚಿತ್ರ ತಾರೆಯರಾದ ಪೂಜಾ ಗಾಂಧಿ, ಸಂಜನಾ, ಮಿಸ್ ಕರ್ನಾಟಕ ಲಕ್ಷ್ಮೀ ಬಂಟ್ವಾಳ ಮಳಿಗೆಗೆ ಆಗಮಿಸಿ ಸ್ಟಾರ್ ಶೋ ನೀಡಿದರು.

ಜಗತ್ತಿನ ಪ್ರಖ್ಯಾತ ಆಭರಣಗಳು ಮಳಿಗೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಲಭ್ಯ. ಮುಂಬಯಿ,ಕೋಲ್ಕತ್ತಾ, ಕೇರಳದಲ್ಲಿ ಉತ್ಪಾದನಾ ಕೇಂದ್ರಗಳನ್ನು ಹೊಂದಿದ್ದು ಆಲುಕಾಸ್ ಜುವೆಲ್ಲರಿ ಬಹು ಮಿಲಿಯನ್ ಡಾಲರ್ ಸಮೂಹ. ಸ್ವರ್ಣ-ವಜ್ರಾಭರಣ ಮಾರಾಟದಲ್ಲಿ ಜಗತ್ತಿನ ಅಗ್ರಗಣ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ಉಡುಪಿಯ ಪ್ರದರ್ಶನ ಮಳಿಗೆ ರಾಜ್ಯದಲ್ಲೇ ಅತಿ ದೊಡ್ಡ ಮಳಿಗೆ.

ಕೇರಳ, ತಮಿಳುನಾಡು, ಕರ್ನಾಟಕ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆಲುಕ್ಕಾಸ್ ಜುವೆಲ್ಲರಿ ಶಾಖೆ ಹೊಂದಿದೆ. ಆಲುಕ್ಕಾಸ್ ಜುವೆಲ್ಲರಿ ಐಎಸ್‌ಒ 9001:2000 ಪ್ರಮಾಣೀಕೃತ ಮೊದಲ ಸ್ವರ್ಣಾಭರಣ ಉದ್ಯಮವಾಗಿದೆ. ಬಿಐಎಸ್ ಪ್ರಮಾಣೀಕೃತ 916 ಹಾಲ್‌ಮಾರ್ಕಿನ ಆಭರಣ ಸಂಸ್ಥೆ ಗುಣಮಟ್ಟಕ್ಕೆ ನೀಡುವ ಆದ್ಯತೆಗೆ ಸಾಕ್ಷಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+