ದಲಿತರಿಗೆ ಶೈಕ್ಷಣಿಕ ಪ್ರಗತಿ ಅತ್ಯವಶ್ಯ

Savanur DSS unit inauguration
ಸವಣೂರ,ಏ.12 : ದಲಿತ ಸಮುದಾಯ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುವದರೊಂದಿಗೆ, ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್ )ಯ ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪೂರ ತಿಳಿಸಿದರು.

ಸವಣೂರ ತಾಲೂಕಿನ ತೊಂಡೂರ ಗ್ರಾಮದಲ್ಲಿ ಡಿ.ಎಸ್.ಎಸ್ ಗ್ರಾಮ ಘಟಕದೊಂದಿಗೆ, ಅಂಬೇಡ್ಕರ್ ಯುವಕ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅವರು, ಕೂಲಿಯಿಂದಲೇ ಜೀವನ ನಿರ್ವಹಿಸುವ ಪಾಲಕರೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕಲ್ಪಿಸಿ, ಅವರ ಭವಿಷ್ಯವನ್ನು ಸುಭದ್ರಗೊಳಿಸಿ ಎಂದು ಕರೆ ನೀಡಿದರು.

ಉದ್ಘಾಟನೆಯನ್ನು ನೆರವೇರಿಸಿದ ಮುಖಂಡ ಡಿ.ಎಸ್ ಮಾಳಗಿ, ಸಚಿವರ ನೆರವಿನೊಂದಿಗೆ ಸಮುದಾಯ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೆನೆ ಎಂದು ಭರವಸೆ ನೀಡಿದರು. ದಲಿತರಿಗೆ ಸರಕಾರ ರೂಪಿಸಿರುವ ಹಲವಾರು ಯೋಜನೆಗಳ ಬಗ್ಗೆ ವಿವರಣೆ ನೀಡಿದರು.

ಸಮಾರಂಭದ ಅತಿಥಿಗಳಾಗಿದ್ದ ರಾಜ್ಯ ಸಂಘಟನಾ ಸಂಚಾಲಕ ವಾಸುದೇವ ಬಸವ್ವನವರ್, ದಲಿತರ ಕೇರಿಯಲ್ಲಿ ಸರಾಯಿ ನಿಷೇದ ಕೈಗೊಳ್ಳಿ. ಸರಾಯಿಯಿಂದಾಗುವ ಸರ್ವನಾಶವನ್ನು ತಪ್ಪಿಸಿಕೊಳ್ಳಿ ಎಂದು ತಿಳಿಸಿದರು. ದಲಿತ ಸಮುದಾಯಕ್ಕೆ ಕಾನೂನಿನ ರಕ್ಷಣೆ ಹಾಗೂ ಸರಕಾರದ ಅನುದಾನಗಳ ಸೌಲಭ್ಯವನ್ನು ವಿವರಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಈಶ್ವರಯ್ಯ ಹಿರೇಮಠ ವಹಿಸಿಕೊಂಡು, ವಿರೂಪಾಕ್ಷಯ್ಯ ಶಾಸ್ತ್ರಿಗಳು ಹಿರೇಮಠ, ತಾ.ಪಂ ಸದಸ್ಯ ಸೋಮಣ್ಣ ಅಮ್ಮನವರ್, ಶಂಕ್ರಣ್ಣ ಹಿರೇಮಠ, ಶ್ರೀಕಾಂತ ಲಕ್ಷ್ಮೇಶ್ವರ, ಜಗನ್ನಾಥ ಭಜಂತ್ರಿ, ಅಶೋಕ ಎಮ್, ಲಕ್ಷ್ಮಣ ಹುಲ್ಲಮ್ಮನವರ್, ಉಮೇಶ ಮೈಲಮ್ಮನವರ್, ಮಹಾದೇವಪ್ಪ ಶ್ಯಾಡಂಬಿ, ಗದಿಗೇಶ ಕ್ಯಾಡದ್, ಜಗದೀಶ ಪೂಜಾರ, ಲಕ್ಷ್ಮಣ ಕನವಳ್ಳಿ ಮುಂತಾದ ಪ್ರಮುಖರ ಉಪಸ್ಥಿತರಿದ್ದರು.ಡಿ.ಎಸ್.ಎಸ್ ಗ್ರಾಮ ಘಟಕದ ಸಂಚಾಲಕರಾಗಿ ಬಸವರಾಜ ಗಾಜಿ, ಪದಾಧಿಕಾರಿಗಳಾಗಿ ಶಿವಪ್ಪ ಗಾಜಿ, ಫಕ್ಕೀರಪ್ಪ ಮರೆಯಪ್ಪನವರ್, ಶಿವಪ್ಪ ದೊಡ್ಮನಿ, ಈರಣ್ಣ ದೊಡ್ಮನಿ, ಶಿವಪ್ಪ ದು. ದೊಡ್ಮನಿ, ಪ್ರಕಾಶ ಸೂರಣಗಿ ಆಯ್ಕೆಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+