ದಂತೇವಾಡ ನರಮೇಧ : ಚಿದು ರಾಜೀನಾಮೆ ತಿರಸ್ಕೃತ
ನವದೆಹಲಿ,
ಏ. 9 : ದಂತೇವಾಡ ನರಮೇಧದ ಹೊಣೆಹೊತ್ತಿರುವ ಪಿ ಚಿದಂಬರಂ ಕೇಂದ್ರ ಗೃಹ ಸಚಿವ ರಾಜೀನಾಮೆ ನೀಡಲು ಮುಂದಾಗಿದ್ದು, ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿ ಕಚೇರಿಗೆ ತಲುಪಿಸಿದ್ದಾರೆ. ಆದರೆ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಚಿದಂಬರಂ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ ಎಂದು ಪ್ರಧಾನಮಂತ್ರಿ ಸಚಿವಾಲಯ ಸ್ಪಷ್ಟಪಡಿಸಿದೆ. id="toptextpromo"> ಸಿಆರ್ ಪಿಎಫ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಸಿಆರ್‌ಪಿಎಫ್ ಯೋಧರ ಭೀಕರ ನರಮೇಧದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿಕೊಳ್ಳುವೆ. ಹೊಣೆಗಾರಿಕೆಯಿಂದ ನಾನು ತಪ್ಪಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಈ ಸಂಬಂಧ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ನಾನು ಪತ್ರ ಬರೆದಿದ್ದು, ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ ಎಂದು ಅವರು ವಿವರಿಸಿದರು. id='are-slot-1' class='oiad oi-axt oiadv'> id='top-searched-articles'> ಸಿಆರ್‌ಪಿಎಫ್‌ನ ಸಿಬ್ಬಂದಿಗಳಿಗೆ ಅತ್ಯುನ್ನತ ವೇತನ, ವಸತಿ ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದರು. ಅಲ್ಲದೆ ಘಟನೆಯಲ್ಲಿ ಸಾವನ್ನಪ್ಪಿದ ಯೋಧರ ಸಂಬಂಧಿಗಳಿಗೆ ಇದೇ ತಿಂಗಳ ಅಂತ್ಯದೊಳಗೆ ಪರಿಹಾರದ ಮೊತ್ತ ಕೈ ಸೇರುವುದು ಮತ್ತು ಕುಟುಂಬದ ಸದಸ್ಯರೋರ್ವರಿಗೆ ಸರಕಾರಿ ಉದ್ಯೋಗ ನೀಡುವುದನ್ನು ತನ್ನ ಸಚಿವಾಲಯವು ಖುದ್ದಾಗಿ ಖಚಿತಪಡಿಸಲಿದೆ ಎಂದೂ ಅವರು ಭರವಸೆ ನೀಡಿದ್ದಾರೆ.











Click it and Unblock the Notifications