ಪುಣೆ ಸ್ಫೋಟದ ರುವಾರಿ ಯಾಸಿನ್ ಭಟ್ಕಳ?
ಪುಣೆ,
ಏ.8: ಕರ್ನಾಟಕದ ಭಟ್ಕಳ ಮೂಲದ ಯಾಸಿನ್ ನನ್ನು ಪುಣೆ ಸ್ಫೋಟದ ಪ್ರಮುಖ ರುವಾರಿ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಹೇಳಿದೆ. ಅಲ್ಲದೆ, ಯಾಸಿನ್ ಗೆ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಸ್ಥಾಪಕ ರಿಯಾಜ್ ಭಟ್ಕಳ ಸಂಬಂಧಿ ಇರಬಹುದು ಎಂದು ತನ್ನ ವರದಿಯಲ್ಲಿ ಎಟಿಎಸ್ ತಿಳಿಸಿದೆ. ಪುಣೆಯ ಕೋರೆಗಾನ್ ಪಾರ್ಕ್ ಪ್ರದೇಶದಲ್ಲಿ ನಡೆದ ಸ್ಫೋಟದಲ್ಲಿ 17 ಜನ ಅಮಾಯಕರು ಮೃತರಾಗಿದ್ದರು. id="toptextpromo">ಪಾಕಿಸ್ತಾನ
ಮೂಲದ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಹಾಗೂ ಸಿಮಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ರಿಯಾಜ್, ಯಾಸಿನ್ , ಇಕ್ಬಾಲ್ ಹಾಗೂ ಇನ್ನಿತರರು ಫೆ. 13 ರ ಪುಣೆ ಜರ್ಮನ್ ಬೇಕರಿ ಸ್ಫೋಟಕ್ಕೆ ಪ್ರಮುಖ ಕಾರಣರು ಎಂದು ಪುಣೆ ಸ್ಫೋಟದ ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. id='are-slot-1' class='oiad oi-axt oiadv'> id='top-searched-articles'>ಕೇಂದ್ರ
ಗೃಹ ಸಚಿವಾಲಯಕ್ಕೆ ಮುಂಬೈ ಬಾಂಬ್ ಸ್ಫೋಟ ಕುರಿತ ವರದಿ ಹಾಗೂ ಪುಣೆ ಸ್ಫೋಟದ ಎಫ್ಐಆರ್ ಸಲ್ಲಿಸಿರುವ ಎಟಿಎಸ್, ಪುಣೆ ಸ್ಫೋಟಕ್ಕೆ ಬೇಕಾಗಿದ್ದ ಕಚ್ಚಾ ವಸ್ತುಗಳನ್ನು ಭಟ್ಕಳದಿಂದಲೇ ಒಯ್ದಿರುವ ಶಂಕೆ ವ್ಯಕ್ತಪಡಿಸಿದೆ. ಸದ್ಯ ಭೂಗತವಾಗಿರುವ ರಿಯಾಜ್, ಯಾಸಿನ್ ಮುಂತಾದ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಎಟಿಎಸ್ ಹೇಳಿದೆ .











Click it and Unblock the Notifications