ಬೆಂಗಳೂರಿನ ಸರ್ವಾಂಗೀಣ ಅಭಿವೃದ್ದಿಗೆ ಬದ್ದ
ಬೆಂಗಳೂರು,
ಮಾ. 5 : ಬೆಂಗಳೂರಿನ ಜನ ಅಭಿವೃದ್ಧಿಗೆ, ಹೊಸ ಚಿಂತನೆಗೆ ಆಧ್ಯತೆ ನೀಡಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಬಹುಮತದತ್ತ ಹೆಜ್ಜೆ ಹಾಕಿದ್ದು ಅತ್ಯಂತ ಖುಷಿಯಾಗಿದೆ. ಈ ಮೂಲಕ ಬಿಜೆಪಿ ಸರಕಾರದ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. id="toptextpromo"> ಬೆಂಗಳೂರಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ಇದೀಗ ನಮ್ಮ ಮುಂದಿರುವ ಮುಖ್ಯ ಗುರಿಯೆಂದರೆ, ಕುಡಿಯುವ ನೀರಿನ ಪ್ರತಿ ವಾರ್ಡ್ ಗೂ ತಲುಪಿಸುವ ಜವಾಬ್ದಾರಿ ಹಾಗೂ ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗಳು ನೀಡುವುದಕ್ಕೆ ಹೆಚ್ಚಿನ ಅಧ್ಯತೆ ನೀಡುತ್ತೇವೆ ಎಂದು ಅವರು ವಿವರಿಸಿದರು. id='are-slot-1' class='oiad oi-axt oiadv'> id='top-searched-articles'> ಇತ್ತೀಚೆಗೆ ವರದಿಗಳು ಬಂದಾಗ ಬಿಜೆಪಿ-92, ಕಾಂಗ್ರೆಸ್-55 ಹಾಗೂ ಜೆಡಿಎಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. 163 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, 86 ಸ್ಥಾನ ಗಳಿಸಿರುವ ಬಿಜೆಪಿಗೆ ಕೇವಲ 8 ಸ್ಥಾನಗಳ ಕೊರತೆ ಇದೆ. ಮ್ಯಾಜಿಕ್ ನಂಬರ್ 94 ಆಗಿದೆ.











Click it and Unblock the Notifications