ರೌಡಿ ಅಲಿ ಈಗ ಬಿಬಿಎಂಪಿ ಕಾರ್ಪೋರೇಟರ್!
ಬೆಂಗಳೂರು,
ಏ. 5 : ವ್ಯಕ್ತಿಯೊಬ್ಬ ರೌಡಿಯಾದರೇನೆಂತೆ ಆತನಿದೆ ಜನಪ್ರಿಯತೆ ಇಲ್ಲವೇ ? ಗೆಲ್ಲವು ತಾಕತ್ತಿದೆಯಲ್ಲವೇ ? ಅಂತಹವರಿಗೆ ಟಿಕೆಟ್ ನೀಡಿದ್ದರಲ್ಲಿ ತಪ್ಪೇನಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಮರ್ಥಿಸಿಕೊಂಡಿದ್ದ ಬನಶಂಕರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವಾನ್ ಅಲಿ ಇದೀಗ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್! id="toptextpromo"> ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಬಲ ಸ್ಪರ್ಧಿಗಳ ನಡುವೆಯೂ ದಿವಾನ್ ಅಲಿ ಜಯ ಸಾಧಿಸಿ ವಿಜಯದ ನಗೆಬೀರಿದ್ದಾನೆ. ಈ ಮೂಲಕ ಕುಮಾರಸ್ವಾಮಿ ಅವರ ಮಾತಿಗೆ ಅಲ್ಲಿನ ಮತದಾರ ಮರ್ಯಾದೆ ತಂದಿದ್ದಾರೆ? ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೂರ್ವಪರದ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು ಮಾದ್ಯಮಗಳು ಬೊಬ್ಬೆ ಹಾಕಿದರೂ ಕೂಡಾ ಬನಶಂಕರಿ ಮಂದಿ ಅಲಿ ಅವರ ತೆನೆ ಹೊತ್ತ ಮಹಿಳೆಗೆ ಮತ ನೀಡಿ ಆತನನ್ನು ಬಿಬಿಎಂಪಿಗೆ ಕಾರ್ಪೋರೇಟರ್ ನನ್ನು ಮಾಡಿದೆ. ಇದು ದೇವರ ಗೆಲುವು, ತಾಯಿ ಬನಶಂಕರಿ ತಾಯಿ ಗೆಲುವು ಎಂದು ದಿವಾನ್ ಅಲಿ ಹರ್ಷ ವ್ಯಕ್ತಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'> ನಾನು ಸಾಮಾಜಕ್ಕಾಗಿ ರೌಡಿಯಾದೆ ಎಂದು ಮತದಾನಕ್ಕೆ ಮಂಚೆ ಮಾಧ್ಯಮಗಳ ದಿವಾನ್ ಅಲಿ ಸಂದರ್ಶನ ನೀಡಿದ್ದ. ಸಾಮಾಜಕ್ಕಾಗಿ ರೌಡಿಯಾದರೆ, ಪಾಲಿಕೆಗೆ ಸದಸ್ಯವಾಗಬಹುದೇ ಎಂದು ಪ್ರಶ್ನಿಸುವಂತಾಗಿದೆ. ದಿವಾನ್ ಅಲಿ ಮೇಲೆ ಕ್ರಿಮಿನಲ್ ಕೇಸ್ ಸೇರಿದಂತೆ 11 ಕೇಸ್ ಗಳು ಇದ್ದವು. ಅದರಲ್ಲಿ 7 ಕೇಸ್ ಗಳಲ್ಲಿ ಅಲಿ ಖುಲಾಸೆಗೊಂಡಿದ್ದಾರೆ. ಇದೀಗ ಅವರು ಪೆರೋಲ್ ಮೂಲಕ ಜೈಲಿನಿಂದ ಹೊರಬಂದಿದ್ದಾರೆ. ಕಾಂಗ್ರೆಸ್ ಟಿಕೆಟ್ ನಿಂದ ವಂಚಿತನಾಗಿದ್ದ ಪೊಲೀಸರ ಪ್ರಕಾರ ರೌಡಿ ಶೀಟರ್ ಲಿಸ್ಟ್ ನಲ್ಲಿರುವ ದಿವಾನ್ ಅಲಿ ಪೆರೋಲ್ ಮೂಲಕ ಜೈಲಿನಿಂದ ಹೊರಬಂದು ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದರು.











Click it and Unblock the Notifications