ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಮಹಿಳೆಯರಿಗೆ ಹೊಸ ಯೋಜನೆ

By Mahesh
|
Google Oneindia Kannada News

Minister Mumtaz Ali Khan
ಚಿಕ್ಕಬಳ್ಳಾಪುರ, ಏ.1: ಉದ್ಯೋಗಸ್ಥ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರಿಗೆ ಹೊಸ ಯೋಜನೆಗಳನ್ನು ಆರಂಭಿಸುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ಸಹಕರಿಸಬೇಕೆಂದು ಸಚಿವ ಮುಮ್ತಾಜ್ ಅಲಿಖಾನ್ ಅವರು ಎನ್ ಜಿಒಗಳಿಗೆ ಕರೆ ನೀಡಿದರು.

ಕರ್ನಾಟಕ ರಾಜ್ಯ ವಕ್ಫ್ ಮಹಿಳಾ ಸಭೆಯ ಅಧ್ಯಕ್ಷತೆ ವಹಿಸಿ ಮತನಾಡಿದ ಅವರು ಉದ್ಯೋಗ ನಿರತ ಮುಸ್ಲಿಂ ಮಹಿಳೆಯರಿಗೆ ವಸತಿ ನಿಲಯಗಳನ್ನು ಪ್ರಾರಂಭಿಸಿ ನಿರ್ಗತಿಕ ಮುಸ್ಲಿಂ ಮಹಿಳೆಯರ ವಸತಿ ಗೃಹ ಯೋಜನೆ ಅನುಷ್ಠಾನ ಮಾಡುವುದು. ಸರ್ಕಾರೇತರ ಸಂಸ್ಥೆಗಳಿಂದ ಮುಸ್ಲಿಂ ಮಕ್ಕಳ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವುದು ಹಾಗೂ ಅಲ್ಪಸಂಖ್ಯಾತರ ಮುಸ್ಲಿಂ ಮಹಿಳೆಯರಿಗೆ ಗಣಕಯಂತ್ರಗಳ ತರಬೇತಿ ಬಗ್ಗೆ ಹೊಸ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಉರ್ದು ಡಿಟಿಪಿ ಕೋರ್ಸು ಕಲಿಯುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ ಮಕ್ಕಳಿಗೆ ಶಿಷ್ಯವೇತನ ಮಂಜೂರು ಮಾಡುವುದು. ಮುಸ್ಲಿಂ ಮಹಿಳೆಯರಿಗೆ ಸ್ವಿಚ್ಚಿಂಗ್ ತರಬೇತಿ ನೀಡಲಾಗುವುದೆಂದು ಸಭೆಯಲ್ಲಿ ನಿರ್ಧರಿಸಿದರು.

ಹೆಚ್ಚಿನ ವಿವರಗಳಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ
ಜಿಲ್ಲಾ ವಕ್ಫ್ ಸಲಹೆ ಕಚೇರಿ
ನಂ.258, ಎಂಜಿ ರಸ್ತೆ, ಚಿಕ್ಕಬಳ್ಳಾಪುರ
ದೂರವಾಣಿ: 94498 48595

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X