ಸಿದ್ಧಗಂಗೆ ಶ್ರೀಗಳಿಗೆ ಭಾರತರತ್ನ ನೀಡಿ
ತುಮಕೂರು,
ಏ. 1 : ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹ ಮಾಡುವ ಈ ಶತಮಾನದ ಆದರ್ಶ ವ್ಯಕ್ತಿಯಾಗಿರುವ ಹಾಗೂ ಸದ್ದಿಲ್ಲದೇ ಅದ್ವಿತೀಯ ಸಾಧನೆ ಸಮಾಜದ ಏಳ್ಗೆಗೆ ಕಾರಣರಾಗಿರುವ ಅಭಿನವ ಬಸವೇಶ್ವರ ಸಿದ್ಧಗಂಗಾ ಮಠದ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳಿಗೆ ಭಾರತರತ್ನ ದೊರೆಯದಿರುವುದು ಕನ್ನಡಗರಿಗೆ ಅತ್ಯಂತ ನೋವಿನ ಸಂಗತಿಯಾಗಿದೆ. ಮುಂಬರುವ ದಿನಗಳಲ್ಲಾದರೂ ಈ ಗೌರವ ಶ್ರೀಗಳಿಗೆ ದೊರೆಯಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರವನ್ನು ಒತ್ತಾಯಿಸಿದರು. id="toptextpromo">ಸಿದ್ದಗಂಗಾ
ಮಠಾಧೀಶ ಶಿವಕುಮಾರ ಸ್ವಾಮಿಗಳ 103 ನೇ ಹುಟ್ಟಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರದ ವತಿಯಿಂದ ಶ್ರೀಗಳಿಗೆ ಬಸವಶ್ರೀ ಪುರಸ್ಕಾರ ನೀಡುತ್ತಿರುವ ವೈಯಕ್ತಿಕವಾಗಿ ನನಗೆ ಹಾಗೂ ನನ್ನ ಸರಕಾರಕ್ಕೆ ಸಿಕ್ಕಿರುವ ಅಪರೂಪದ ಅವಕಾಶ ಎಂದರು. ಶಿವಕುಮಾರ ಸ್ವಾಮೀಜಿಗಳಂಥ ಮೇರು ವ್ಯಕ್ತಿತ್ವವನ್ನು ಗೌರವಿಸುವ ಅವಕಾಶ ದೊರೆತಿರುವುದು ನನ್ನ ಅದೃಷ್ಟ ಎಂದು ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಶಿವಕುಮಾರ
ಸ್ವಾಮೀಜಿಗಳಿಗೆ ಭಾರತ ರತ್ನ ಈಗಾಗಲೇ ಸಿಗಬೇಕಿತ್ತು. ಆದರೆ, ಇವರ ಸೇವೆಯನ್ನು ಪರಿಗಣಿಸದಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಾದರೂ ಕೇಂದ್ರ ಸರಕಾರ ಶ್ರೀಗಳ ಸೇವೆಯನ್ನು ಪರಿಗಣಿಸಿ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಅವರು ಆಗ್ರಹಿಸಿದರು.











Click it and Unblock the Notifications