ಲೆ. ಜ. ವಿಕೆ ಸಿಂಗ್ ಭಾರತದ ಸೇನಾ ಮುಖ್ಯಸ್ಥ
ನವದೆಹಲಿ,
ಮಾ.31: ಲೆಫ್ಟಿನೆಂಟ್ ಜನರಲ್ ವಿಕೆ ಸಿಂಗ್ ಅವರು ಭೂ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಬುಧವಾರದಂದು ನಿವೃತ್ತಿ ಹೊಂದಿದ್ದ ಜನರಲ್ ದೀಪಕ್ ಕಪೂರ್ ಅವರ ಸ್ಥಾನವನ್ನು 59 ವರ್ಷದ ವಿಕೆ ಸಿಂಗ್ ಅವರು ಅಲಂಕರಿಸಲಿದ್ದಾರೆ. ಭಾರತ ಸೇನೆಯ 26ನೇ ಮುಖ್ಯಸ್ಥರಾಗಿ ಪದಗ್ರಹಣ ಮಾಡಲಿರುವ ವಿಕೆ ಸಿಂಗ್ ಅವರು ಸುಮಾರು 14 ಲಕ್ಷ ಯೋಧರ ಮುಖಂಡರಾಗಿ ಕಾರ್ಯನಿರ್ವಹಿಸಲಿದ್ದಾರೆ. id="toptextpromo">ರಜಪೂತ
ಸೈನಿಕಪಡೆ(Rajput regiment )ಯ ಮೂರನೇ ಪೀಳಿಗೆ ಅಧಿಕಾರಿಗಳ ವರ್ಗಕ್ಕೆ ಸೇರಿದ ವಿಕೆ ಸಿಂಗ್ ಅವರ ನೇಮಕಾತಿ ಕುರಿತು ಕೇಂದ್ರ ರಕ್ಷಣಾ ಇಲಾಖೆ ಜ.23 ರಂದು ಆದೇಶ ಹೊರಡಿಸಿತ್ತು. ಭಾರತದ ಪ್ರಪ್ರಥಮ ದಂಡನಾಯಕ ಕೆಎಂ ಕಾರ್ಯಪ್ಪ ಅವರು ಕೂಡ ರಜಪೂತ ಸೈನಿಕಪಡೆಯ ಲ್ಲಿದ್ದವರು ಎಂಬುದನ್ನು ಸ್ಮರಿಸಬಹುದು. id='are-slot-1' class='oiad oi-axt oiadv'> id='top-searched-articles'>ಲೈನ್
ಆಫ್ ಕಂಟ್ರೋಲ್(LOC) ನಲ್ಲಿ ಕರ್ತವ್ಯ ನಿರ್ವಹಣೆ ನಂತ, ಎಲ್ ಟಿಟಿಇ ವಿರುದ್ಧದ ಆಪರೇಷನ್ ಪವನ್ ನಲ್ಲಿ ಪಾಲ್ಗೊಂಡಿದ್ದರು. 1971 ರ ಬಾಂಗ್ಲಾದೇಶ ಯುದ್ಧ, ಆಪರೇಶನ್ ಪರಾಕ್ರಮ್ , ಸಂಸತ್ ಭವನದ ಮೇಲಿನ ಉಗ್ರರ ದಾಳಿ ವಿರುದ್ಧ ಹೋರಾಟ ಸೇರಿದಂತೆ ಹತ್ತು ಹಲವು ಪ್ರಮುಖ ಕಾರ್ಯಾಚರಣೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ವಿಕೆ ಸಿಂಗ್ ಅವರ ಸೇವೆಯನ್ನು ಪರಿಗಣಿಸಿ, ಭಾರತ ಸರ್ಕಾರ ಅವರಿಗೆ ಅತಿ ವಿಶಿಷ್ಟ ಸೇವಾ ಪದಕ (AVSM) ನೀಡಿ ಗೌರವಿಸಿದೆ.











Click it and Unblock the Notifications