ಜರ್ದಾರಿ ನನ್ನ ತಂದೆ ಕೊಂದ ಕೊಲೆಗಾರ
ಕರಾಚಿ,
ಮಾ.31 : ತನ್ನ ತಂದೆ ಮಿರ್ ಮುರ್ತಾಜ್ ಭುಟ್ಟೋರನ್ನು ಕೊಂದ ಕೊಲೆಗಾರನ ಕೈಯಲ್ಲಿ ಪಾಕಿಸ್ತಾನದ ಆಡಳಿತ ಚುಕ್ಕಾಣಿ ಇದೆ ಎಂದು ಪಾಕ್‌ನ ಮಾಜಿ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೋ ಮೊಮ್ಮಗಳು ಫಾತೀಮಾ ಭುಟ್ಟೋ ಗಂಭೀರ ಆರೋಪ ಮಾಡಿದ್ದಾರೆ. id="toptextpromo">ತಮ್ಮ
ಪುಸ್ತಕ ಸಾಂಗ್ಸ್ ಆಫ್ ಬ್ಲಡ್ಸ್ ಅಂಡ್ ಸ್ವಾರ್ಡ್ಸ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಫಾತೀಮಾ ಭುಟ್ಟೋ, ಸುಮಾರು 14 ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕೊಂದ ಘಟನೆಯನ್ನು ಬಿಡಿಸಿಟ್ಟರು. ತಮ್ಮ ಭಾಷಣದುದ್ದಕ್ಕೂ ಜರ್ದಾರಿ ಅವರ ಹೆಸರನ್ನು ಉಲ್ಲೇಖಿಸದೆ ಆರೋಪಿಸಿದ ಫಾತಿಮಾ, ತಂದೆಯ ಹಂತಕರು ಪ್ರಸ್ತುತ ದೇಶವನ್ನಾಳುತ್ತಿರುವುದು ದುರ್ದೈವದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ತಮ್ಮ
ತಂದೆಯನ್ನು ಕೊಂದಿದ್ದು ಯಾರೆಂಬುದಕ್ಕೆ ಸಾಕ್ಷಿ ಕೂಡ ಸಿಕ್ಕಿತ್ತು. ಮುರ್ತಾಜ್ ಭುಟ್ಟೋ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿದವರನ್ನು ಬಂಧಮುಕ್ತಗೊಳಿಸಿ ನಂತರ ಅವರಿಗೆ ರಾಷ್ಟ್ರೀಯ ಪದಕವನ್ನು ಕೊಟ್ಟು ಪುರಸ್ಕರಿಲಾಗಿತ್ತು ಎಂದು ಅವರು ಕಿಡಿಕಾರಿದರು.











Click it and Unblock the Notifications