ಮೂರನೇ ಐಚ್ಛಿಕ ಭಾಷೆಯಾಗಿ ತುಳು
ಉಡುಪಿ,
ಮಾ.27 :ಪ್ರಾಥಮಿಕ ಶಾಲೆಯ 6ನೇ ತರಗತಿ ಯಿಂದ ಮೊದಲ್ಗೊಂಡು ತೃತೀಯ ಭಾಷೆಯಾಗಿ ತುಳುವನ್ನು 2010-11 ನೇ ಸಾಲಿನ ಶೈಕ್ಷಣಿಕ ವರ್ಷ ದಿಂದ ಕಲಿಸಲು ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ಆದೇಶದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸ್ತುತ 5ನೇ ತರಗತಿಯಲ್ಲಿ ಕಲಿಯುತ್ತಿರುವ 12ಸಾವಿರ ವಿದ್ಯಾರ್ಥಿಗಳ ತುಳು ಕಲಿಕೆಗೆ ಹಾದಿ ಸುಗಮವಾಗಿದೆ. ತುಳುವಿಗೆ ಪ್ರತ್ಯೇಕ ಲಿಪಿ ಅಭಿವೃದ್ಧಿ ಪಡೆಸಲಾಗಿದ್ದರೂ ಕನ್ನಡದಲ್ಲೇ ಕಲಿಸಲು ಅಕಾಡೆಮಿ ಆಸಕ್ತಿ ವಹಿಸಿದೆ. id="toptextpromo">ಈ
ಬೋಧನೆ 10ನೇ ತರಗತಿ ವರೆಗೆ ಮುಂದುವರಿಯಲಿದೆ. ಪ್ರಾಥಮಿಕ ಶಾಲೆಯಲ್ಲಿ ತುಳು ಪಠ್ಯವನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ 2009 ರಲ್ಲಿ ತುಳು ಅಕಾಡೆಮಿ ಅಧ್ಯಕ್ಷರು ಬೆಂಗಳೂರಿನಲ್ಲಿ ಎಲ್ಲ ತುಳು ಸಂಘಟನೆಗಳ ಮುಖ್ಯಸ್ಥ ರೊಂದಿಗೆ ಸಭೆ ನಡೆಸಿ ಈ ಬಗ್ಗೆ ಸರಕಾರವನ್ನು ಒತ್ತಾಯಿಸಲು ಸಮಿತಿ ರಚಿಸಿದ್ದರು. ಅಕಾಡೆಮಿ ಸದಸ್ಯ ಉದಯ ಧರ್ಮಸ್ಥಳ ಅವರನ್ನು ಸಮಿತಿ ಸಂಚಾಲಕರನ್ನಾಗಿ ನೇಮಿಸಲಾಗಿತ್ತು. ಈ ಸಮಿತಿ ಸಂಚಾಲಕರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಸಲ್ಲಿಸಲಾದ ಬೇಡಿಕೆ ಫಲವಾಗಿ ಪ್ರಸ್ತಾವನೆಗೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಾಸೆಲ್
ಮಿಷನ್ ಸ್ಕೂಲ್ ನವರು ಮತ ಪ್ರಚಾರಕ್ಕಾಗಿ 1892ರಲ್ಲಿ ತುಳು ಭಾಷೆಯನ್ನು ಪಠ್ಯವಾಗಿ ಕಲಿಸಲು ಪ್ರಯತ್ನಿಸಿದ್ದರು. ಆದರೆ ಆಂಗ್ಲ ಭಾಷೆಯ ವ್ಯಾಮೋಹದಿಂದ ತುಳು ಕಲಿಕೆಗೆ ಹಿನ್ನಡೆಯಾಗಿ ಮೂರನೇ ತರಗತಿಯಲ್ಲಿ ನಿಂತು ಹೋಗಿತ್ತು.ಕನ್ನಡ,ಇಂಗ್ಲೀಷ್, ಹಿಂದಿ, ಅರಬ್ಬಿ, ಪರ್ಷಿಯನ್, ಸಂಸ್ಕೃತ ಮತ್ತು ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯಗಿ ಕಲಿಯಲು ಈಗಾಗಲೇ ಅವಕಾಶ ಕಲ್ಪಿಸಲಾಗಿದೆ.











Click it and Unblock the Notifications