ಗೃಹಖಾತೆಗೆ ಆಚಾರ್ಯ ಗುಡ್ ಬೈ ?

ಸಿಎಂ ಆಪ್ತರ ತೀವ್ರ ಹಸ್ತಕ್ಷೇಪ, ಖಾತೆಗೆ ಸಂಬಂಧಪಟ್ಟ ಯಾವ ವಿಷಯಗಳಲ್ಲೂ ಸ್ವತಂತ್ರ ಇಲ್ಲದಿರುವುದು. ಅಧಿಕಾರಿಗಳ ಅಸಡ್ಡೆ ಮುಂತಾದ ಕಾರಣಗಳಿಂದ ಆಚಾರ್ಯ ತೀವ್ರ ಮನನೊಂದಿದ್ದಾರೆಂದು ತಿಳಿದು ಬಂದಿದೆ. ಪೋಲಿಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳು ತಮ್ಮ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಏನೇ ಸೂಚನೆ ನೀಡಿದರೂ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳುತ್ತಾರೆ.
ಗೃಹ ಖಾತೆಯಂತ ಜಾಗದಲ್ಲಿ ಕುಳಿತು ಸರಕಾರಕ್ಕೆ ಕಿರಿಕಿರಿ ಉಂಟು ಮಾಡುವ ಕೆಲಸ ಮಾಡಲಾಗುವುದಿಲ್ಲ. ವಿಧಾನಸೌಧದಲ್ಲಿರುವ ನನ್ನ ಕಚೇರಿ ಟಪಾಲು ಕೆಂದ್ರದಂತಾಗಿದೆ ಎಂದು ಆಚಾರ್ಯ ಕೇಶವಕೃಪಾದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ದಶಕಗಳ ಕಾಲ ಪಕ್ಷಕ್ಕಾಗಿ ದುಡಿದಿರುವ ಆಚಾರ್ಯ ಅವರನ್ನು ಕಡೆಗಣಿಸಬಾರದೆಂದು. ಅವರಿಗೆ ಹಣಕಾಸಿನಂತಹ ಬೇರೆ ಖಾತೆಯನ್ನು ನೀಡಬೇಕು, ಸಾಧ್ಯವಾಗದಿದ್ದಲ್ಲಿ ಬೇರೆ ಪ್ರಮುಖ ಖಾತೆಯನ್ನು ನೀಡಿ ಎಂದು ಸಂಘ ಪರಿವಾರದ ನಾಯಕರು ಯಡಿಯೂರಪ್ಪ ಅವರಿಗೆ ಆದೇಶ ನೀಡಿದ್ದಾರೆನ್ನಲಾಗಿದೆ.












Click it and Unblock the Notifications